ಕಲಬುರಗಿ : ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್ ಎದುರುಗಡೆಯಿರುವ 'ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು ಕಾಲೇಜಿನ ಎನ್‌ಎಸ್.ಎಸ್ ಘಟಕದ ವತಿಯಿಂದ ಇಂದು "ಅಂತಾರಾಷ್ಟ್ರೀಯ ಭ್ರೂಣ ಹತ್ಯೆ ವಿರೋಧಿ ದಿನಾಚರಣೆ" ಜರುಗಿತು. ಕಾಲೇಜಿನ ಪ್ರಾಂಶುಪಾಲೆ ಡಾ.ಭಾಗಿರತಿ ಎಚ್.ಗುಡ್ಡೇವಾಡಿ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಗೌರವ ಸಲಹೆಗಾರ ಶಿವಯೋಗೆಪ್ಪಾ ಎಸ್. ಬಿರಾದಾರ, ಎನ್.ಎಸ್.ಎಸ್ ಅಧಿಕಾರಿ ಪ್ರೊ.ಹಣಮಂತರಾಯ ಗುಡ್ಢೇವಾಡಿ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.