ಹುಮನಾಬಾದ್​ ತಾಲೂಕಿನ ಕಬೀರಾಬಾದ ವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಮೈಲಾರ ಮಲ್ಲಣ್ಣ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಸಚಿವ ರಾಜಶೇಖರ ಪಾಟೀಲ್​ ದರ್ಶನ ಪಡೆದರು. ಪ್ರದಿಪ ಮುತ್ಯಾ ಇತರರಿದ್ದರು 
ರಾಜ್ಯ

ಜೀವನದಲ್ಲಿ ಮಾನವೀಯ ಮೌಲ್ಯ ಅವಳಡಿಸಿಕೊಳ್ಳಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರಾಜಶೇಖರ ಪಾಟೀಲ್​ ಸಲಹೆ
  • ಕಬೀರಾಬಾದ ವಾಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ
ಹುಮನಾಬಾದ್​: ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಬೇಕೆಂದು ಮಾಜಿ ಸಚಿವ ರಾಜಶೇಖರ ಪಾಟೀಲ್​ ಹೇಳಿದರು.
ತಾಲೂಕಿನ ಕಬೀರಾಬಾದ ವಾಡಿ ಗ್ರಾಮದ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಮೈಲಾರ ಮಲ್ಲಣ್ಣ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರೂ ದಿನನಿತ್ಯ ದೇವರ ನಾಮ ಸ್ಮರಣೆ ಮಾಡಬೇಕು. ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಉತ್ತಮ ಶಿಣ ಹಾಗೂ ಸಂಸ್ಕಾರಗಳನ್ನು ನೀಡಬೇಕು. ಮಕ್ಕಳು ಕೂಡ ಪಾಲಕರ ಮಾರ್ಗದರ್ಶನದಲ್ಲಿ ಮುನ್ನಡೆದು ನಿರಂತರ ಅಧ್ಯಾಯನ ಮಾಡುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಮೈಲಾರ ಮಲ್ಲಣ್ಣ ದೇವರ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ನನ್ನ ಅವಧಿಯಲ್ಲಿ 4 ಲ ಹಾಗೂ ಭೀಮರಾವ ಪಾಟೀಲ್​ ಅವರ ಅನುದಾನದಲ್ಲಿ 4 ಲ ಸೇರಿ ಒಟ್ಟು 8 ಲ ರೂ.ದಾನದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕಬೀರಾಬಾದ ಗ್ರಾಮದ ಅಭಿವೃದ್ಧಿಗೆ ಸದಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರದಿಪ ಮುತ್ಯಾ, ಮಲ್ಲಿಕಾರ್ಜುನ ಸಂಗೋಳಗಿಕರ, ಮಾಣಿಕ ವಗ್ಗೆ, ಕಾಶಿರಾಮ ಪಾಟೀಲ್​, ತಾನಾಜಿ ಪಾಟೀಲ್​, ವಿಶ್ವನಾಥ ಬಾವಗಿ, ಮೋಹನ ಹುಮನಾಬಾದೆ, ಪಂಡಿತ ಬಾವಗೆ, ಶ್ರೀನಿವಾಸ ಪಾಟೀಲ್​, ವಿಠಲ್​ ಡಾವರಗಾಂವ, ವಿಜಯಕುಮಾರ ವಗ್ಗೆ, ಭಾಗ್ಯವಂತ ವಗ್ಗೆ, ದಿನೇಶ ವಗ್ಗೆ, ವೀರಶಟ್ಟಿ ವಗ್ಗೆ, ಶಿವಕುಮಾರ ಬೆಳಕೇರಾ, ಅನಿಲ ಕಬೀರಾದ ಪಾಟೀಲ್​, ಸಂಜೀವಕುಮಾರ ವಡ್ಡನಕೇರಾ ಇತರರಿದ್ದರು.