ಕಲಬುರಗಿ ಜೇವರ್ಗಿ ಕಾಲನಿ ರಾವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಶ್ರೀನಿಧಿ, ಪಂ.ಗಿರೀಶಾಚಾರ್ಯ ಅವಧಾನಿ, ನರಸಿಂಹಾಚಾರ್ಯ ಭುರ್ಲಿ, ರಮೇಶ ಕುಲಕರ್ಣಿ ಇತರರಿದ್ದರು.
- ಸಂಸತಿ ಚಿಂತಕ ಡಾ.ಶ್ರೀನಿಧಿ ಸಲಹೆ
- ರಾಯರ ಮಠದಲ್ಲಿ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ: ಮನುಷ್ಯ ಅತಿಯಾಗಿ ಯಂತ್ರಗಳ ದಾಸರಾಗದೆ ವೈಯಕ್ತಿಕ ಸಾಧನೆ ಹಾಗೂ ತಪಸ್ಸಿನ ಕಡೆ ಗಮನ ನೀಡಬೇಕು. ನಿರಂತರ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಶಾಸವನ್ನು ಆಳವಾಗಿ ಮನನ ಮಾಡಿ ಹೃದ್ಗತ ಮಾಡಿಕೊಳ್ಳಬೇಕು ಎಂದು ಖ್ಯಾತ ವಿದ್ವಾಂಸ, ಸಂಸತಿ ಚಿಂತಕ ಡಾ.ಶ್ರೀನಿಧಿ ಸಲಹೆ ನೀಡಿದರು.
ಜೇವರ್ಗಿ ಕಾಲನಿ ಶ್ರೀ ರಾವೇಂದ್ರ ಸ್ವಾಮಿ ಮಠದ ಆವರಣದಲ್ಲಿ ತತ್ವವಾದ ಶೈಣಿಕ ವಿವಿಧೋದ್ದೇಶ ಟ್ರಸ್ಟ್ ಹಾಗೂ ಶ್ರೀ ರಾವೇಂದ್ರ ಸ್ವಾಮಿ ಭಕ್ತವೃಂದದ ಸಹಯೋಗದಡಿ ಆಧುನಿಕತೆ, ತಂತ್ರಾನ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ತತ್ವ ಸಿದ್ಧಾಂತದ ಚಿಂತನೆ ಮಹತ್ವ ಕುರಿತು ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರೋಪಕಾರ, ಸಮಾಜ ಸೇವೆ, ತುರ್ತು ಕೆಲಸಗಳಿಗಾಗಿ ತಂತ್ರಾನ ಮತ್ತು ಯಂತ್ರ ಬಳಕೆ ತಪ್ಪಲ್ಲ, ಆದರೆ ಮನುಷ್ಯ ಭಗವಂತ ನೀಡಿದ ಸಹಜವಾದ ಶಕ್ತಿ ವೃದ್ಧಿಸಿಕೊಳ್ಳಬೇಕು. ಶ್ರವಣ, ಮನನ, ನಿಧಿಧ್ಯಾಸನದ ಕಡೆ ಹೆಚ್ಚು ಗಮನ ಕೊಟ್ಟು ದಿನನಿತ್ಯದ ಅಧ್ಯಯನ, ಸಾಧನೆಗೆ ತಂತ್ರಾನದ ಮೊರೆ ಹೋಗುವುದು ಬೇಡ ಎಂದರು.
ಭಾರತದ ಪಾರಂಪರಿಕ ಮೌಲ್ಯಗಳ ವರ್ಧನೆಗೆ ಪಣ ತೊಡಬೇಕು. ಪರಂಪರೆಯ ಬೀಜಗಳನ್ನು ರಸುವ ಕಾರ್ಯ ನಿರಂತರ ನಡೆಯಬೇಕು. ಆಧುನಿಕ ಸಮಸ್ಯೆಗಳನ್ನು ಶಾಸಿಯವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ವಿದ್ವಾಂಸರಾದ ಪಂ.ಗಿರೀಶಾಚಾರ್ಯ ಅವಧಾನಿ, ಪಂ.ಗೋಪಾಲಾಚಾರ್ಯ ಅಕಮಂಚಿ, ನರಸಿಂಹಾಚಾರ್ಯ ಭುರ್ಲಿ, ರಮೇಶ ಕುಲಕರ್ಣಿ, ನಾರಾಯಣ ಜಹಾಗೀರದಾರ, ಶ್ರೀಪಾದ ಜೋಶಿ, ಪವನ ಕೊರವಿ, ಸುಧೀಂದ್ರ ಕುಲಕರ್ಣಿ ಜೋಗೂರ, ವ್ಯಾಸೇಂದ್ರ ಜೋಶಿ, ಶ್ರೀನಿವಾಸ ಸಿರನೂರಕರ್, ವ್ಯಾಸರಾಜ ಸಂತೆಕಲ್ಲೂರ, ಪ್ರಹ್ಲಾದ್ ಭುರ್ಲಿ, ಗೋವಿಂದ ಪೂಜಾರ್, ಡಾ.ಗಿರೀಶ ಗಲಗಲಿ, ಅವಿನಾಶ ಕುಲಕರ್ಣಿ, ಸುಧೀಂದ್ರ ದೇಶಪಾಂಡೆ, ವಿನಾಯಕ ಕುಲಕರ್ಣಿ, ಶೈಲಜಾ ಕೊಪ್ಪರ್ ಇತರರಿದ್ದರು. ಸಂಜೀವ ಸಿರನೂರಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಕೊರಳ್ಳಿ ನಿರೂಪಣೆ ಮಾಡಿದರು. ಪ್ರವಿಣ ಆಲಗೂಡಕರ್ ವಂದಿಸಿದರು.