ಮದ್ದೂರು ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಮಂಚಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.  
ರಾಜ್ಯ

ಶ್ರೀ ಮಂಚಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

ಮದ್ದೂರು: ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಮಂಚಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬುಧವಾರ ಸಂಜೆ 4-30 ರಿಂದ 5-10ರ ಶುಭ ಮಿಥುನ ಲಗ್ನದಲ್ಲಿ ಅಂಕುರಾರ್ಪಣೆ, ಸ್ವಸ್ತಿವಾಚನ, ಧ್ವಜಾರೋಹಣ ಮತ್ತು ರಾತ್ರಿ 8 ಗಂಟೆಗೆ ಶುದ್ಧ ಪುಣ್ಯಾಹ, ಮಹಾಗಣಪತಿ ಪೂಜೆ, ಉಮಾಮಹೇಶ್ವರ, ವರುಣ, ಕಮಲವಾಸ್ತು ಮೃತ್ಯುಂಜಯ ಪೂಜೆ, ಅಷ್ಟ ದಿಕ್ಪಾಲಕ ಪೂಜೆ, ನವಗ್ರಹ ಪೂಜೆ, ಯಜ್ಞ ಜರುಗಿದವು.

ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ, 5.30 ರಿಂದ 6.30ರವರೆಗೆ ಆಲಯ ಪ್ರವೇಶ, ವಿಗ್ರಹ ಶುದ್ಧಿ, ಬೆಳಗ್ಗೆ 8.16ರಿಂದ 9-30ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಶ್ರೀ ಮಂಚಮ್ಮದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ, ಗೋಪುರ ಕಳಶ ಸ್ಥಾಪನೆ, ಶ್ರೀ ಗಣಪತಿ ವಿಗ್ರಹ, ಶ್ರೀ ಮಾಸ್ತಮ್ಮ ಹಸ್ತರೇಖೆ ಪ್ರತಿಷ್ಠಾಪನೆ ನಂತರ ಅಭಿಷೇಕ, ಅಷ್ಟೋತ್ತರ ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆದವು. ಮಧ್ಯಾಹ್ನ 12.30 ರಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಗಣ್ಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕರಾದ ಶಿವರಾಮು, ಮಹಾದೇವಮ್ಮ, ಕುಮಾರಸ್ವಾಮಿ, ಮುಖಂಡರಾದ ಮಹೇಶ್, ಮಂಚಣ್ಣ, ಮಹದೇವ, ಕೃಷ್ಣ, ನಂದೀಶ, ಮಲ್ಲೇಶ್, ಗಿರೀಶ್, ಪ್ರಕಾಶ್, ಸಂತೋಷ, ವಿನೋದ್ ರಾಜ್, ಧನಂಜಯ, ಮೃತ್ಯುಂಜಯ, ಹರಿಪ್ರಸಾದ್ ಇತರರು ಇದ್ದರು.