ಕಕ್ಕೇರಾದಲ್ಲಿ ನೂತನ ಬಸ್ ನಿಲ್ದಾಣ ರಸ್ತೆ ಬಳಿ ಹಾಲುಮತ ಸಮಾಜ ಅಳವಡಿಸಿದ ಸಂಗೊಳ್ಳಿ ರಾಯಣ್ಣ ನಾಮ-Àಲಕ.
- ಪೊಲೀಸರ ಸಕಾಲಿಕ ಕ್ರಮದಿಂದ ವಾತಾವರಣ ತಿಳಿ
- ನಿರ್ಮಾಣ ಹಂತದ ಬಸ್ ನಿಲ್ದಾಣ ಎದುರು ವಿದ್ಯಮಾನ
ಸ್ವಾತಂತ್ರ÷್ಯ ದಿನವಾದ ಶನಿವಾರ ಮೂವರು ಮಹಾತ್ಮರ ಹೆಸರಿನ ನಾಮ-Àಲಕ ಅಳವಡಿಕೆ ವಿಷಯ ಕೆಲ ತಾಸು ಗೊಂದಲ ಜತೆ ಉದ್ರಿಕ್ತ ಸ್ಥಿತಿ ಸೃಷ್ಟಿಸಿತ್ತು. ಪೊಲೀಸರು ಸಮಯೋಚಿತ ನಡೆ ಮೂಲಕ ವಾತಾವರಣ ತಿಳಿಗೊಳಿಸಿದರು.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ ನಿಲ್ದಾಣ ರಸ್ತೆ ಬಳಿ ಸಂಗೊಳ್ಳಿ ರಾಯಣ್ಣ ವೃತ್ತ ಎಂಬ ನಾಮ-Àಲಕವನ್ನು ಅಭಿಮಾನಿಗಳು ಶುಕ್ರವಾರ ರಾತ್ರಿ ಅಳವಡಿಸಿದ್ದರು. ಅನುಮತಿ ಇಲ್ಲದೆ ಅಳವಡಿಸಿದ್ದ ಬೋರ್ಡ್ ಶನಿವಾರ ಬೆಳಗ್ಗೆ ಪುರಸಭೆ ಅಽಕಾರಿಗಳು ತೆರವುಗೊಳಿಸಿದರು. ಆಕ್ಷೇಪ ವ್ಯಕ್ತಪಡಿಸಿದ ರಾಯಣ್ಣ ಅಭಿಮಾನಿಗಳಿಗೆ ಪುರಸಭೆ ಅನುಮತಿ ಇಲ್ಲದೆ ಅಳವಡಿಸಿದ್ದ ನಾಮ-Àಲಕ ತೆರವುಗೊಳಿಸಲಾಗಿದೆ ಎಂದು ಅಽಕಾರಿಗಳು ಸ್ಪಷ್ಟನೆ ನೀಡಿದರು. ಆದರೆ ನಮ್ಮನ್ನು ಕೇಳದೆ ಹೇಗೆ ತೆಗೆದಿದ್ದೀರಿ ಎಂದು ಪುರಸಭೆ ಸದಸ್ಯ ಮಲ್ಲು ದಂಡಿನ್, ದ್ಯಾವಪ್ಪ ಜಂಪಾ, ಮಲ್ಲು ಹುಲಿಕೇರಿ, ವೆಂಕಟೇಶ ಅಸ್ಕಿ ನೇತೃತ್ವದಲ್ಲಿ ರಸ್ತೆಯಲ್ಲಿ ಕೆಲಕಾಲ ಮಿಂಚಿನ ಪ್ರತಿಭಟನೆ ಮಾಡುತ್ತಿದ್ದ ವೇಳೆ ಹಾಲುಮತ ಸಮಾಜದ ಮುಖಂಡರು ನಾಮ-Àಲಕವನ್ನು ತಂದು ಅದೇ ಜÁಗದಲ್ಲಿ ಅಳವಡಿಸಿ ಪೂಜೆ ಸಲ್ಲಿಸಿ ತೆರಳಿದರು.
ಅಷ್ಟೋತ್ತಿಗಾಗಲೇ ವಿಷಯ ತಿಳಿದ ಪೊಲೀಸರು ಜಮಾಗೊಳ್ಳುತ್ತಿದ್ದಂತೆ ವಾಲ್ಮೀಕಿ ಸಮಾಜದ ಚಂದ್ರು ವಜ್ಜಲ್, ಸೋಮನಾಥ ಸೊಲ್ಲಾಪುರ, ರಾಜು ಹವಾಲ್ದಾರ್ ನೇತೃತ್ವದಲ್ಲಿ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತ ಮತ್ತು ವೀರಶೈವ-ಲಿಂಗಾಯತ ಸಮಾಜದ ಪರಮಣ್ಣ ಕಮತಗಿ, ಬಸಯ್ಯ ಸ್ವಾಮಿ, ಪ್ರಕಾಶ ಕುಂಬಾರ ನೇತೃತ್ವದಲ್ಲಿ ಬಸವೇಶ್ವರ ವೃತ್ತ ಎಂಬ ನಾಮ-Àಲಕಗಳನ್ನು ಕೆಲಹೊತ್ತು ಹಿಂದೆ ಅಳವಡಿಸಿದ್ದ ಸಂಗೊಳ್ಳಿ ರಾಯಣ್ಣ ಬೋರ್ಡ್ ಅಕ್ಕ-ಪಕ್ಕ ಅಳವಡಿಸಿ ಕಲ್ಲುಗಳಿಂದ ಮಾರ್ಕ್ ಮಾಡುತ್ತಿದ್ದರು. ಪೊಲೀಸರು ಅಡ್ಡಿಪಡಿಸಿದ್ದರಿಂದ ಕೆಲಕಾಲ ಕಾವೇರಿದ ಪರಿಸ್ಥಿತಿ ಉಂಟಾಯಿತು. ಮಧ್ಯಪ್ರವೇಶಿಸಿದ ಸಿಪಿಐ ರವಿಕುಮಾರ ಅವರು ವೃತ್ತಗಳ ಅಳವಡಿಕೆಗೆ ನಮ್ಮದೇನೂ ಅಭ್ಯಂತರವಿಲ್ಲ ಆದರೆ ಕಲ್ಲುಗಳಿಂದ ಮಾರ್ಕ್ ಮಾಡಿ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ತಿಳಿಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣ ಎದುರು ಮತ್ತು ಅಕ್ಕ-ಪಕ್ಕ ಕಿರಿದಾದ ಜÁಗದಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ಮತ್ತು ಸಮಾಜಕ್ಕೆ ಸಮಾನತೆ ಸಾರಿದ ಮಹಾನ್ ವ್ಯಕ್ತಿಗಳ ವೃತ್ತದಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಲಿದೆ ಎಂಬ ಪರಿಜÁ್ಞನ ಮತ್ತು ಅಳವಡಿಕೆಗೆ ಪುರಸಭೆ ಅನುಮತಿ ಪಡೆಯಬೇಕು ಎಂಬ ಮಾಹಿತಿ ಇಲ್ಲವೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದವು. ಹುಣಸಗಿ ವೃತ್ತ ನಿರೀಕ್ಷಕ ರವಿಕುಮಾರ, ಕೊಡೇಕಲ್, ಹುಣಸಗಿ, ನಾರಾಯಣಪುರ ಠಾಣೆ ಪಿಎಸ್‌ಐ ಸೇರಿ ಹೆಚ್ಚಿನ ಸಿಬ್ಬಂದಿ ಬೀಡುಬಿಟ್ಟಿದ್ದರು.