ದೊಡ್ಡಬಳ್ಳಾಪುರ ತಾಲೂಕಿನ ಅಮ್ಮನಗುಡ್ಡದಲ್ಲಿ ಆದಿಶಕ್ತಿ ವಿಶ್ವರೂಪ 27ಅಡಿ ಎತ್ತರದ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಕ್ಷೇತ್ರದ ನರಸಿಂಹಮೂರ್ತಿ ಸ್ವಾಮೀಜಿ ಇದ್ದರು. 
ರಾಜ್ಯ

27 ಅಡಿ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ / DODDABALLAPU

ದೊಡ್ಡಬಳ್ಳಾಪುರ : ಮಧುರೆ ಹೋಬಳಿಯ ಕನ್ನಮಂಗಲ ಗೇಟ್​ ಬಳಿಯ ಅಮ್ಮನಗುಡ್ಡದಲ್ಲಿ ಆದಿಶಕ್ತಿ ವಿಶ್ವ ಸತ್ಯ ಶಕ್ತಿ ಸ್ವರೂಪಿಣಿ ದೇವಿಯ 27 ಅಡಿ ಎತ್ತರದ ಏಕಶಿಲಾ ವಿಗ್ರಹದ ಬಿಂಬ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ನೆರವೇರಿತು. ಕ್ಷೇತ್ರದ ಸಂಸ್ಥಾಪಕ ಶ್ರೀಗಳಾದ ನರಸಿಂಹಮೂರ್ತಿ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
ವಿಗ್ರಹದ ವಿಶೇಷತೆ: 27ಅಡಿ ಎತ್ತರದ ಕೃಷ್ಣಶಿಲೆ ದೇವಿ ವಿಶ್ವರೂಪದ ವಿಗ್ರಹದಲ್ಲಿ ತ್ರಿಮೂರ್ತಿಗಳ ಜನ್ಮದಾತೆಯ ದಶಾವತಾರ ಬಿಡಿಸಲಾಗಿದೆ. 6 ಅಡಿ ಪೀಠ ಭಾಗದಲ್ಲಿ ಮೂರು ಹಂತದ ಪೀಠ ಸ್ಥಾಪಿಸಲಾಗಿದೆ. ಪೀಠದ ಕೆಳಗೆ ಸಾಲಿಗ್ರಾಮ ಶಿಲೆಗಳನ್ನು ಹಾಕಲಾಗಿದೆ.
ಜ.23ಕ್ಕೆ ಪ್ರಾಣ ಪ್ರತಿಷ್ಠಾಪನೆ : ವಿಶ್ವ ಸತ್ಯ ಶಕ್ತಿ ಸ್ವರೂಪಿಣಿ ಅಮ್ಮನವರ ಕೃಷ್ಣಶಿಲೆಯಿಂದ ಕೆತ್ತಿರುವ ಪೀಠ ಸೇರಿ 27ಅಡಿ ಮೂರ್ತಿ ವಿಗ್ರಹವನ್ನು ಜ.19 ರಿಂದ 27 ರವರೆಗೆ ನಡೆಯುವ ಜಾತ್ರಾ ಕಾರ್ಯಕ್ರಮದಲ್ಲಿ ಜ.23 ಶುಕ್ರವಾರ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದು, ಲೋಕ ಕಲ್ಯಾಣಾರ್ಥವಾಗಿ ಬೆಳಗ್ಗೆ 6ರಿಂದ 12ರವರೆಗೆ ಮಹಾ ಪೂರ್ಣಾಹುತಿ ನೆರವೇರಿಸಲಾಗುವುದು. ಮಧ್ಯಾಹ್ನ 12.5ಕ್ಕೆ ಮಹಾಮಂಗಳಾರತಿ ಹಾಗೂ 1.30ಕ್ಕೆ ಅನ್ನದಾಸೋಹ ಏರ್ಪಡಿಸಲಾಗಿದೆ ಎಂದು ಶ್ರೀನರಸಿಂಹಮೂರ್ತಿ ಸ್ವಾಮೀಜಿ ತಿಳಿಸಿದ್ದಾರೆ.