ಬಿಆರ್‌ಟಿ ವಲಯ ಅರಣ್ಯಾಧಿಕಾರಿ ವಾಸು ಅವರಿಗೆ ಶ್ರೀ ಸಿದ್ದೇಶ್ವರ ಗ್ರಾಮಾಭಿವೃದ್ಧಿ ಹಾಗೂ ಹಬ್ಬ ಹರಿದಿನ ಜಾತ್ರಾ ಸೇವಾ ಸಮಿತಿ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. 
ರಾಜ್ಯ

ಸಿದ್ದೇಶ್ವರ ಬೆಟ್ಟಕ್ಕೆ ಸೋಲಾರ್ ಅಳವಡಿಸಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ದೇಶ್ವರ ಬೆಟ್ಟ
  • ಕಾಡು ಪ್ರಾಣಿಗಳು ಬಾರದಂತೆ ಸೋಲಾರ್ ಅಳವಡಿಸಬೇಕು
ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಕಾಡು ಪ್ರಾಣಿಗಳು ಬಾರದಂತೆ ಸೋಲಾರ್ ಅಳವಡಿಸಬೇಕು ಎಂದು ಒತ್ತಾಯಿಸಿ ಶ್ರೀ ಸಿದ್ದೇಶ್ವರ ಗ್ರಾಮಾಭಿವೃದ್ಧಿ ಹಾಗೂ ಹಬ್ಬ ಹರಿದಿನ ಜಾತ್ರಾ ಸೇವಾ ಸಮಿತಿ ಮನವಿ ಮಾಡಿದೆ.
ಈ ಸಂಬಂಧ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ವಾಸು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಿದ್ದೇಶ್ವರ ಬೆಟ್ಟ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಅನೇಕ ಭಕ್ತರು ಪೂಜೆ ಸಲ್ಲಿಸಲು ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಸ್ಥಳದಲ್ಲಿ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹೆಚ್ಚಾಗಿ ಪ್ರತ್ಯಕ್ಷವಾಗಿರುವುದರಿಂದ ಇಲ್ಲಿಗೆ ಬರುವ ಭಕ್ತರು ಭಯಭೀತರಾಗಿದ್ದಾರೆ. ಆದ್ದರಿಂದ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸೋಲಾರ್ ಅಳವಡಿಸುವ ಮೂಲಕ ಭಕ್ತರು ಯಾವುದೇ ಆತಂಕ ಇಲ್ಲದೆ ಪೂಜೆ ಸಲ್ಲಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.