ತಂತಿಬೇಲಿಯೊಡನೆ ಸೂಚನಾ ಲಕ ಅಳವಡಿಸಿ wire fence 
ರಾಜ್ಯ

ತಂತಿಬೇಲಿಯೊಡನೆ ಸೂಚನಾ ಲಕ ಅಳವಡಿಸಿ wire fence

ಮುಳಬಾಗಿಲು: ಕೃಷಿ ಇಲಾಖೆಯಿಂದ ತಾಲೂಕಿನಲ್ಲಿ ಒಟ್ಟು 251 ಕೃಷಿ ಹೊಂಡಗಳನ್ನು ನಿಮಾರ್ಣ ಮಾಡಿದ್ದು, ಇದುವರೆಗೂ 118 ಕೃಷಿ ಹೊಂಡಗಳಿಗೆ ತಂತಿಬೇಲಿ ಅಳವಡಿಸಲಾಗಿದೆ. ಉಳಿದ 133ರಲ್ಲಿ 80 ಕೃಷಿ ಹೊಂಡಗಳು ಪ್ರಗತಿಯಲ್ಲಿವೆ. 53 ಕೃಷಿ ಹೊಂಡಗಳ ರೈತರು ಕೂಡಲೇ ತಂತಿಬೇಲಿ ಅಳವಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಉಪನಿರ್ದೇಶಕಿ ಕೆ.ಅನೀಸ್​ ಸಲ್ಮಾ ಸೂಚಿಸಿದರು.wire fence
ತಾಲೂಕಿನ ಕಸಬಾ ಹೋಬಳಿಯ ಕದರೀಪುರ ಗ್ರಾಮದ ನಾಗರಾಜ್​ ಬಿನ್​ ವೆಂಕಟರಾಮಪ್ಪ ಕೃಷಿಭಾಗ್ಯ (ಎಸ್ಡಿಎಂಸಿ) ಯೋಜನೆಯಡಿ ನಿರ್ಮಿಸಿರುವ ಕೃಷಿ ಹೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಕೃಷಿ ಹೊಂಡಗಳಲ್ಲಿ ಬಿದ್ದು ಪ್ರಾಣಹಾನಿ ಸಂಭವಿಸುವುದನ್ನು ತಪ್ಪಿಸಲು ತಂತಿಬೇಲಿ ಅಳವಡಿಸಿಕೊಳ್ಳುವ ಜೊತೆಗೆ ಸೂಚನಾ ಫಲಕ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದರು.