ಹುಮನಾಬಾದ್​ ಹೊರವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಸಹಾಯಕ ಆಯುಕ್ತ ಪ್ರಕಾಶ ಕುದರೆ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಹಸೀಲ್ದಾರ್​ ಜಗದೀಶ್​ ಚೌರ, ತಾಪಂ ಇಒ ದೀಪಿಕಾ ನಾಯ್ಕರ್​, ಪಿಎಸ್​ಐ ಸುರೇಶಕುಮಾರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಂತೋಷ ಇತರರಿದ್ದರು. 
ರಾಜ್ಯ

ವಿವಿಧ ಕಾರ್ಖಾನೆಗಳ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ ಕೈಗಾರಿಕಾ ಪ್ರದೇಶಕ್ಕೆ ಎಸಿ ಪ್ರಕಾಶ ಕುದರೆ ನೇತೃತ್ವದ ತಂಡ ಭೇಟಿ
ಹುಮನಾಬಾದ್​: ಹೊರವಲಯದ ಕೈಗಾರಿಕಾ ಪ್ರದೇಶದ ವಿವಿಧ ಕಾರ್ಖಾನೆಗಳಿಗೆ ಸಹಾಯಕ ಆಯುಕ್ತ ಪ್ರಕಾಶ ಕುದರೆ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಖಾನೆಗಳಲ್ಲಿ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಸಮರ್ಪಕ ಪಾಲಿಸದಿರುವ ದೂರು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕರ್ನಾಟಕ ಪೇಪರ್​ ಕಂಪನಿ, ಸ್ಕೂಟಿಕ್​ ಲ್ಯಾಬ್ಸ್​ ಪೆವೇಟ್​ ಲಿಮಿಟೆಡ್​, ಆರ್​-ಕೆಮ್​ ಪೆವೇಟ್​ ಲಿಮಿಟೆಡ್​, ರಾಡಿಸನ್​ ಲ್ಯಾಬ್ಸ್​, ಪ್ರೋಮಿನಲ್​, ನಿಚಿನೋ ಹಾಗೂ ಫಾಮಾರ್ಸ್ಯುಟಿಕಲ್​ ಕಾರ್ಖಾನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.
ತ್ಯಾಜ್ಯವನ್ನು ಎಸ್​ಒಪಿ (ಸ್ಟಾಂಡರ್ಡ್​ ಆಪರೇಟಿಂಗ್​ ಪ್ರೋಸಿಜರ್​) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ನಿಗದಿಪಡಿಸಿರುವ ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಕೆಲ ಕಾರ್ಖಾನೆಗಳಿಂದ ಹೊಗೆ ಹೊರಸೂಸುತ್ತಿರುವುದು, ಅಂತರ್ಜಲ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಕುರಿತು ಮಾಹಿತಿ ಸಂಗ್ರಹಿಸಿದರು.
ತಹಸೀಲ್ದಾರ್​ ಜಗದೀಶ್​ ಚೌರ, ತಾಪಂ ಇಒ ದೀಪಿಕಾ ನಾಯ್ಕರ್​, ಪಿಎಸ್​ಐ ಸುರೇಶಕುಮಾರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಂತೋಷ, ಜೆಸ್ಕಾಂ ಸಹಾಯಕ ನಿರ್ದೇಶಕ ರಮೇಶ್​ ಮೈನಳೆ ಇತರರಿದ್ದರು.-----------
"

ಡಿಸಿ ನಿರ್ದೇಶನದಂತೆ ಗಡವಂತಿ ಕೈಗಾರಿಕಾ ಪ್ರದೇಶದ ಕೆಂಪು ವರ್ಗಕ್ಕೆ ಸೇರಿರುವ ಕೈಗಾರಿಕೆಗಳಿಗೆ ನನ್ನ ನೇತೃತ್ವದಲ್ಲಿ ತಹಸೀಲ್ದಾರ್​, ಪರಿಸರ ಅಧಿಕಾರಿ, ತಾಪಂ ಇಒ, ಕೈಗಾರಿಕಾ ಅಧಿಕಾರಿ, ಪೊಲೀಸರೊಂದಿಗೆ ಎಂಟು ಕಾರ್ಖಾನೆ ಪರಿಶೀಲನೆ ನಡೆಸಿಲಾಗುವುದು. ಇಂದು 6 ಕಾರ್ಖಾನೆ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

— > -ಪ್ರಕಾಶ ಕುದರೆ ಸಹಾಯಕ ಆಯುಕ್ತ