Inspection of polytechnic building work
ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ನ ಕಟ್ಟಡ ಕಾಮಗಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪರಿಶೀಲಿಸಿದರು.
ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ನಿಮಾರ್ಣ ಮಾಡಿರುವ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಸಂಪೂರ್ಣ ಅವಸಾನದ ಅಂಚಿಗೆ ತಲುಪಿದ ಪರಿಣಾಮ ಸಚಿವ ಡಾ.ಎಂ.ಸಿ.ಸುಧಾಕರ್ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಕಟ್ಟಡಗಳ ನಿಮಾರ್ಣಕ್ಕೆ ಮುಂದಾಗಿದ್ದು, 26 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿಮಾರ್ಣವಾಗಲಿದೆ.
2ನೇ ಹಂತದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿಮಾರ್ಣ ಕಾಮಗಾರಿಗೆ ಚಾಲನೆ ದೊರಕಿಸಿದ್ದು, ಪಾಲಿಟೆಕ್ನಿಕ್ನ ಪ್ರವೇಶದ್ವಾರ, ಕಟ್ಟಡ ಸೇರಿ ಇತರ ಹಳೇ ಕಟ್ಟಡಗಳನ್ನು ನೆಲಸಮ ಮಾಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇಂಜಿನಿಯರ್ ಮತ್ತು ಗುತ್ತಿಗೆದಾರರೊಂದಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ನಿಮಾರ್ಣ ಕಾಮಗಾರಿಗಳನ್ನು ಪರಿಶೀಲಿಸಿದರು.