ಮಹಾಲಕ್ಷ್ಮಿ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು. ಶಾಸಕ ಕೆ. ಗೋಪಾಲಯ್ಯ, ಹಿರಿಯ ಅಧಿಕಾರಿಗಾಳಾದ ರೋಹಿಣಿ ಸಿಂಧೂರಿ, ಕೆ.ಜ್ಯೋತಿ, ಕೆಎಸ್‌ಟಿಐಡಿಸಿ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಬಾಲಾಜಿ ಮತ್ತಿತರರಿದ್ದರು. 
ರಾಜ್ಯ

ಕೈಮಗ್ಗ ಉದ್ಯಮದ ಭವಿಷ್ಯಕ್ಕೆ ಹೊಸತನ ಅಗತ್ಯ: ಕೈಮಗ್ಗ ಮೇಳಕ್ಕೆ ಸಚಿವ ಶಿವಾನಂದ ಪಾಟೀಲ್ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಕೈಮಗ್ಗ ಉದ್ಯಮದ ಭವಿಷ್ಯಕ್ಕೆ ಹೊಸತನ ಅಗತ್ಯ
  • ಕೈಮಗ್ಗ ಮೇಳಕ್ಕೆ ಸಚಿವ ಶಿವಾನಂದ ಪಾಟೀಲ್ ಚಾಲನೆ
  • ಮಹಾಲಕ್ಷ್ಮೀ ಲೇಔಟ್ ರಾಣಿ ಅಬ್ಬಕ್ಕ ಮೈದಾನದಲ್ಲಿ 15 ದಿನ ನಡೆಯುವ ಕೈಮಗ್ಗ ಮೇಳ

ಬೆಂಗಳೂರು:ಆಧುನಿಕತೆಯಭರಾಟೆಯಲ್ಲಿ ಪಾರಂಪರಿಕ ಕೈಮಗ್ಗಉದ್ಯಮದ ಭವಿಷ್ಯಕ್ಕೆ ಹೊಸತನದಅಗತ್ಯವಿದ್ದು,ಅದಕ್ಕೆ ಬೇಕಾದಪೂರಕ ಅಂಶಗಳನ್ನು ನೂತನ ಜವಳಿನೀತಿಯಲ್ಲಿ ಸೇರ್ಪಡೆ ಮಾಡಲಾಗುವುದುಎಂದು ಜವಳಿ ಹಾಗೂ ಸಕ್ಕರೆ ಖಾತೆಸಚಿವ ಶಿವಾನಂದ ಪಾಟೀಲ ಹೇಳಿದರು.

ಮಹಾಲಕ್ಷ್ಮಿಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿರಾಜ್ಯ ಮತ್ತು ಕೇಂದ್ರ ಸರ್ಕಾರದಆಶ್ರಯದಲ್ಲಿ ಆಯೋಜಿಸಿರುವ 15ದಿನಗಳ ರಾಷ್ಟ್ರೀಯಕೈಮಗ್ಗ ಮೇಳವನ್ನು ಶುಕ್ರವಾರಉದ್ಘಾಟಿಸಿ ಮಾತನಾಡಿದರು.

ನೇಕಾರಸಮ್ಮಾನ್ ಯೋಜನೆಯಲ್ಲಿ ನೀಡುತ್ತಿದ್ದ2 ಸಾವಿರರೂ. ಆರ್ಥಿಕನೆರವನ್ನು ರಾಜ್ಯ ಸರ್ಕಾರ 5ಸಾವಿರ ರೂ.ಗಳಿಗೆಹೆಚ್ಚಳ ಮಾಡಿದೆ.2025-26ನೇ ಸಾಲಿನಲ್ಲಿ1.2 ಲಕ್ಷಕೈಮಗ್ಗ ಮತ್ತು ವಿದ್ಯುತ್ ಮಗ್ಗನೇಕಾರರನ್ನು ಈ ಯೋಜನೆಯಲ್ಲಿಅಳವಡಿಸಲು 60ಕೋಟಿ ರೂ.ಹಂಚಿಕೆ ಮಾಡಲಾಗಿದೆ.ನೇಕಾರರ ಮಕ್ಕಳಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹನೀಡುವ ದೃಷ್ಟಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.ಬಹಳ ಮುಖ್ಯವಾಗಿವಿದ್ಯುತ್ ಮಗ್ಗಗಳಿಗೆ 10ಹೆಚ್‌ಪಿವರೆಗೆಪ್ರತಿಶತ ನೂರರಷ್ಟು ವಿದ್ಯುತ್ರಿಯಾಯಿತಿ ನೀಡಲಾಗಿದೆ.10.ರಿಂದ 20ಹೆಚ್‌ಪಿವರೆಗಿನಮಗ್ಗಗಳಿಗೆ ಪ್ರತಿ ಯೂನಿಟ್‌ಗೆ1.25 ರೂ.ಗಳಂತೆರಿಯಾಯಿತಿ ದರದಲ್ಲಿ ವಿದ್ಯುತ್ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆವಿದ್ಯುತ್ ಸಹಾಯ ಯೋಜನೆಗೆ 250ಕೋಟಿ ರೂ.ಗಳನ್ನುಇಲಾಖೆಯಿಂದ ಖರ್ಚು ಮಾಡಲಾಗಿದೆಎಂದು ಸಚಿವರು ವಿವರಿಸಿದರು.

ಕಾವೇರಿಹ್ಯಾಂಡ್‌ಲೂಮ್ ಅಧ್ಯಕ್ಷ ಜೆ.ಬಿ.ಗಣೇಶ್ ಮಾತನಾಡಿ, ಕಾವೇರಿಹ್ಯಾಂಡ್‌ಲೂಮ್ಸ್ ಪುನಶ್ಚೇತನಕ್ಕೆಸರ್ಕಾರದಿಂದ 25ಕೋಟಿ ರೂ.ನೆರವು ಹಾಗೂಕೆಎಚ್‌ಡಿಸಿ ಮಾದರಿಯಲ್ಲಿ 4ಎಚ್ ಸೌಲಭ್ಯನೀಡುವಂತೆ ಸಚಿವರಿಗೆ ಮನವಿಮಾಡಿದರು.

ಕಾರ್ಯಕ್ರಮದಲ್ಲಿಶಾಸಕ ಗೋಪಾಲಯ್ಯ,ಇಲಾಖೆ ಕಾರ್ಯದರ್ಶಿರೋಹಿಣಿ ಸಿಂಧೂರಿ,ಕೈಮಗ್ಗ ಮತ್ತುಜವಳಿ ಇಲಾಖೆ ಆಯುಕ್ತೆ ಕೆ.ಜ್ಯೋತಿ,ಕೆಎಸ್‌ಟಿಐಡಿಸಿಅಧ್ಯಕ್ಷ ಚೇತನ್,ಉಪಾಧ್ಯಕ್ಷಬಾಲಾಜಿ ಮತ್ತಿತರರಿದ್ದರು.

ಸಮಗ್ರಜವಳಿ ಪಾರ್ಕ್

ಕಲಬುರಗಿಯಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರಗಳಸಹಭಾಗಿತ್ವದಲ್ಲಿ ಸಮಗ್ರ ಜವಳಿಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು,ಮೂಲ ಸೌಕರ್ಯಕಲ್ಪಿಸಲು 390.26ಕೋಟಿ ರೂ.ಬಿಡುಗಡೆಗೆಸಚಿವ ಸಂಪುಟ ಅನುಮೋದನೆ ನೀಡಿದೆ.ಒಂದೇ ಸೂರಿನಡಿಜವಳಿ ಉದ್ಯಮದ ಎಲ್ಲ ಉತ್ಪನ್ನಗಳನ್ನುಇಲ್ಲಿ ಉತ್ಪಾದಿಸುವ ಗುರಿ ಇದೆಎಂದು ಸಚಿವ ಶಿವಾನಂದ ಪಾಟೀಲ್ತಿಳಿಸಿದ್ದಾರೆ.