ಬಜೆಟ್ನಲ್ಲಿ ವಕೀಲರಿಗೆ ಅನ್ಯಾಯ lawyers
- ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ರವಾನಿಸಿದ ವಕೀಲರು
ಮುಳಬಾಗಿಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನಲ್ಲಿ ವಕೀಲರನ್ನು ಸಂಪೂರ್ಣ ರ್ನಿಲಸಲಾಗಿದೆ ಎಂದು ಆಪಾದಿಸಿ ಮುಳಬಾಗಿಲು ವಕೀಲರು ಸೋಮವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಬೈಕ್ ರ್ಯಾಲಿ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಉಪತಹಸೀಲ್ದಾರ್ ಆರ್. ಕೊಂಡಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.lawyers
ಮುಳಬಾಗಿಲು ವಕೀಲರ ಸಂದ ಅಧ್ಯ ಎನ್. ಸತೀಶ್ಕುಮಾರ್ ಮಾತನಾಡಿ, ವಕೀಲರ ಸಮೂಹದ ಬಹುದಿನಗಳ ಬೇಡಿಕೆಗಳಾದ ವಕೀಲರ ಗೌರವಧನ ಹೆಚ್ಚಳ, ನ್ಯಾಯಾಲಯಗಳಲ್ಲಿ ವಕೀಲರಿಗೆ ಬೇಕಾದ ಮೂಲ ಸೌಕರ್ಯ ಪೂರೈಕೆ, ವಕೀಲರ ಸಂಗಳಿಗೆ ಸರ್ಕಾರದಿಂದ ನೀಡುತ್ತಿದ್ದ ವಾರ್ಷಿಕ ನಿರ್ವಹಣಾ ನಿಧಿಗೆ ಮರುಚಾಲನೆ, ವಕೀಲರ ರಣಾ ಕಾಯ್ದೆ ಯಥಾವತ್ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ಧೋರಣೆ ಮತ್ತು 2025&26ನೇ ಸಾಲಿನ ಬಜೆಟ್ನಲ್ಲಿ ವಕೀಲರ ಕಲ್ಯಾಣಕ್ಕೆ ಯಾವುದೇ ನಿಧಿ ಮೀಸಲಿಡದೆ ಇರುವುದು ಖಂಡನೀಯ. ರಾಜ್ಯ ಸರ್ಕಾರ ತಣ ಈ ಬಗ್ಗೆ ಗಮನಹರಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ವಕೀಲರ ಬಗ್ಗೆ ಕಾಳಜಿ ಇಲ್ಲ ಎಂಬುದು ರಾಜ್ಯ ಬಜೆಟ್ನಲ್ಲಿ ಸಾಬೀತಾಗಿದೆ, ವಕೀಲರ ಸಂದ ಮೂಲಕ ವಕೀಲರ ಸಮಸ್ಯೆಗಳ ಬಗ್ಗೆ ಹಲವಾರು ಹೋರಾಟಗಳು ಮತ್ತು ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಪರಿಗಣನೆ ಮಾಡಿಲ್ಲ. ಆದ್ದರಿಂದ ತಣ ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು.