ದಿಗ್ಗಾಂವ್, ಮೊಗಲಾ ಗ್ರಾಪಂ ವ್ಯಾಪ್ತಿಗಳ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚಿತ್ತಾಪುರದಲ್ಲಿ ತಹಸೀಲ್ದಾರ್ಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು. ಶಾಮರಾಯ ಸಂಗಾವಿ, ಶ್ರೀಶೈಲ್ ಪಾಟೀಲ್, ಆಯಿಲ್ರೆಡ್ಡಿ ಪಾಟೀಲ್ ಯರಗಲ್, ಅರ್ಜುನ ಸಾಲಹಳ್ಳಿ, ಬಸವರಾಜ ಬಿರಾದಾರ ಇತರರಿದ್ದರು.
- ದಿಗ್ಗಾಂವ್, ಮೊಗಲಾ ಗ್ರಾಪಂ ವ್ಯಾಪ್ತಿ ರೈತರಿಂದ ಆಕ್ರೋಶ
- ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಚಿತ್ತಾಪುರ: ಬೆಳೆ ವಿಮೆ ಪರಿಹಾರ ವಿತರಿಸುವಲ್ಲಿ ತಾರತಮ್ಯ ಆಗಿದ್ದು, ದಿಗ್ಗಾಂವ್ ಹಾಗೂ ಮೊಗಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅಲ್ಪ ಪರಿಹಾರ ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಮರಾಯ ಸಂಗಾವಿ ದೂರಿದರು.
ಪ್ರಜಾಸೌಧದ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ ಅವರಿಗೆ ಮನವಿಪತ್ರ ಸಲ್ಲಿಸಿದ್ದು, ತಾಲೂಕಿನ ರೈತರಿಗೆ ಬೆಳೆ ವಿಮೆ ಹಣ ಈಗಾಗಲೇ ಕೆಲವು ಕಂತುಗಳ ಹಣ ಮಂಜೂರಿ ಮಾಡಿರುತ್ತಾರೆ. ಆದರೆ ಬಹುತೇಕ ರೈತರಿಗೆ 2025-26ನೇ ಸಾಲಿನ ಕಡೆಯ ಕಂತಿನ ಹಣ ಜಮೆ ಆಗಿರುವುದಿಲ್ಲ. ಬಹುಸಂಖ್ಯಾತರ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ ಎಂದು ಕಿಡಿಕಾರಿದರು.
ಪರಿಹಾರ ಹಣ ಆ.3ರೊಳಗಾಗಿ ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಬೇಕು. ರ್ನಿಲಕ್ಷ ವಹಿಸಿದರೆ ಚಿತ್ತಾಪುರದ ಅಂಬೇಡ್ಕರ್ ವೃತ್ತದಿಂದ ಲಾಡ್ಜಿಂಗ್ ಕ್ರಾಸ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯಧ್ಯಕ್ಷ ಶ್ರೀಶೈಲ್ ಪಾಟೀಲ್ ದಿಗ್ಗಾಂವ್, ತಾಲೂಕು ಗೌರವ ಅಧ್ಯಕ್ಷ ಆಯಿಲ್ರೆಡ್ಡಿ ಪಾಟೀಲ್ ಯರಗಲ್, ಉಪಾಧ್ಯಕ್ಷ ಅರ್ಜುನ ಸಾಲಹಳ್ಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಪ್ರಮುಖರಾದ ಗುರುಲಿಂಗಪ್ಪ ಕೆಂಪನೋರ, ಕಿಶನ್ ಪವಾರ್, ಶಿವಯೋಗಿ ಕಲ್ಕರಿ, ವಿಜಯಕುಮಾರ ರಾಠೋಡ್, ಅಶೋಕ ಗುತ್ತೇದಾರ್, ಮಲ್ಲಿಕಾರ್ಜುನ ಬಂದಳ್ಳಿ, ಶಂಭುಲಿಂಗ ಸಂಗಾವಿ, ವೀರೇಶ ಭಂಗಿ, ಭೀಮರಾಯ ದೇವರ, ದೇವಿಂದ್ರಪ್ಪ ಅಲ್ಲೂರ, ಶರಣಪ್ಪ ಅವಂಟಿ, ಸಾಬಣ್ಣ ಪೂಜಾರಿ, ಸಾಬಣ್ಣ ಡಿಗ್ಗಿ, ಮಹ್ಮದ್ ದಸ್ತಗಿರ, ಮೌಲನಸಾಬ, ಭಾಗಪ್ಪ ದೊರೆ ಇತರರಿದ್ದರು.