Injustice in NREGA payments
ಪಾವಗಡ: ಬೂದಿಬೆಟ್ಟ ಗ್ರಾಪಂನ ದೊಡ್ಡ ಬಂದ್ರೆ ಕುಂಟೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ 60 ಕೂಲಿ ಕಾರ್ಮಿಕರು ಹೂಳೆತ್ತುವ ಕಾಮಗಾರಿಯ ಕೆಲಸ ಮಾಡುತ್ತಿದ್ದು, ಡಿ.21, 23ರಂದು ಕೆಲಸ ಮಾಡಿದ ಕಾರ್ಮಿಕರಿಗೆ ಉದ್ದೇಶ ಪೂರ್ವಕವಾಗಿ ನರೇಗಾ ಹಣ ಪಾವತಿ ತಡೆಹಿಡಿದು ಕಾರ್ಮಿಕರಿಗೆ ಅನ್ಯಾಯ ಎಸಗಿದ್ದಾರೆಂದು ಆರೋಪಿಸಿ ಗ್ರಾಪಂ ಮುಂದೆ ಕೂಲಿ ಕಾರ್ಮಿಕರು ಪ್ರತಿಭಟಿಸಿದರು.
ತಮಟೆ ಕೂಲಿ ಕಾರ್ಮಿಕರ ಸಂಘದ ತಾಲೂಕು ಸಂಚಾಲಕ ಬಳಸಮುದ್ರ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 34 ಗ್ರಾಪಂ ಪೈಕಿ ಬೂದಿಬೆಟ್ಟ ಪಂಚಾಯಿತಿಯಲ್ಲಿ ಹೂಳೆತ್ತುವ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ನರೇಗಾ ಹಣ ಪಾವತಿಸುವಲ್ಲಿ ಪದೇಪದೆ ತೊಂದರೆ ಮಾಡುತ್ತಿದ್ದಾರೆ. ಕಳೆದ ವರ್ಷ ನರೇಗಾ ಕಾರ್ಮಿಕರಿಗೆ ದಿನದ ಕೂಲಿ 370 ರೂ. ಬದಲಿಗೆ 119 ರೂ. ಪಾವತಿಸಿ ಅನ್ಯಾಯ ಎಸಗಿತ್ತು. ಈಗ ಡಿಸೆಂಬರ್ 21 ಮತ್ತು 23 ದಿನಾಂಕದಂದು ದಿನ ಪೂರ್ತಿ ಕೆಲಸ ಮಾಡಿದ್ದರೂ ಬೂದಿಬೆಟ್ಟ ಗ್ರಾಪಂ ಪಿಡಿಒ ಮತ್ತು ಇಂಜಿನಿಯರ್ ಅಧಿಕಾರಿಗಳು ಜಿಪಿಎಸ್ ೋಟೋ ತೆಗೆದುಕೊಂಡು ಹಣ ಪಾವತಿ ಮಾಡದೇ ವಿನಾಕಾರಣ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ದಿನನಿತ್ಯ ಮನೆ ಬಿಟ್ಟು ಬೆಳಗ್ಗೆಯಿಂದ ಬಿಸಿಲಿನಲ್ಲಿ ದುಡಿಯುವ ನಮಗೆ ಕೂಲಿ ಹಣ ಪಾವತಿಸದೆ ಅನ್ಯಾಯ ಮಾಡಿದ್ದಾರೆ. ಕೇಳಿದರೆ ತಾಂತ್ರಿಕ ದೋಷವೆಂದು ನೆಪ ಹೇಳುತ್ತಿದ್ದಾರೆಂದು ಪ್ರತಿಭಟನಾ ನಿರತ ಕೂಲಿ ಕಾರ್ಮಿಕರು ಆರೋಪಿಸಿದರು.
ತಾಪಂ ಸಹಾಯಕ ನಿರ್ದೇಶಕ ಮಾರುತೀ ಪ್ರಸಾದ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ಮಾಡಿ ಸಮಸ್ಯೆ, ಅನ್ಯಾಯದ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಇಲ್ಲದೆ ವರ್ಷಪೂರ್ತಿ ಕೆಲಸ ನೀಡಿ ಹಣ ಪಾವತಿಯಲ್ಲಿ ತೊಂದರೆಯಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ತಮಟೆ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ, ಮಮತಾ, ಜ್ಯೋತಿ, ಭಾಗ್ಯಮ್ಮ, ನಾಗರಾಜು, ಕೂಲಿಕಾರ್ಮಿಕರಾದ ಲಕ್ಷ$್ಮಮ್ಮ, ಅಲುವೇಲಮ್ಮ, ಪುಟ್ಟಿ ಸೇರಿ 60 ಜನ ಕೂಲಿ ಕಾರ್ಮಕರಿದ್ದರು.