ಯಾದಗಿರಿ ವಾರ್ಡ್ 11ರ ಆಶ್ರಯ ಕಾಲನಿಗೆ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಡಾ.ಎಸ್.ಎಸ್.ನಾಯಕ, ಉಮೇಶ ಮುದ್ನಾಳ್, ಶರಣಮ್ಮ, ನಿಜಾಮುದ್ದಿನ್, ಭೀಮಾಶಂಕರ, ಪವನ್, ಮಾರೆಪ್ಪ, ಬಸವರಾಜ ಇತರರಿದ್ದರು.
- ಪೌರಾಯುಕ್ತ ಉಮೇಶ ಚವ್ಹಾಣ್ ಭರವಸೆ
- ಉಮೇಶ ಮುದ್ನಾಳ್ ಮನವಿಗೆ ಸ್ಪಂದನೆ
ಯಾದಗಿರಿ: ಗಂಜ್ ಸರ್ಕಲ್ನ ದೊಡ್ಡಕೆರೆಯ ಕೆಳಭಾಗದ ವಾರ್ಡ್ 11ರ ಆಶ್ರಯ ಕಾಲನಿ (ಅಶೋಕ ನಗರ)ಗೆ ಅಗತ್ಯ ಮೂಲಸೌಕರ್ಯ ಒದಗಿಸುವುದಾಗಿ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಭರವಸೆ ನೀಡಿದ್ದಾರೆ.
ಶನಿವಾರ ಕಾಲನಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ ಅವರು, ಇಡೀ ಕಾಲನಿ ಸ್ವಚ್ಛಗೊಳಿಸಿ ವಿಷಜಂತುಗಳು ಬರದಂತೆ ನೋಡಿಕೊಳ್ಳಲಾಗುವುದು. ರಸ್ತೆ ಸಂಪರ್ಕ, ಶೌಚಗೃಹ, ಶುದ್ಧ ಕುಡಿಯುವ ನೀರಿನ ಟಕ ಆರಂಭಿಸುವುದಾಗಿ ಹೇಳಿದರು.
ನಿವಾಸಿಗಳ ಸುರಕ್ಷೆಗಾಗಿ ನಿತ್ಯವೂ ಪೊಲೀಸ್ ಬಿಟ್ ಹಾಕಲು ಎಸ್ಪಿ ಹಾಗೂ ವಾರ್ಡ್ಗೆ ಹೊಂದಿಕೊಂಡಿರುವ 80 ಅಡಿ ರಸ್ತೆ ಸುಧಾರಣೆಗಾಗಿ ಶಾಸಕರ ಗಮನಕ್ಕೆ ತರಲಾಗುವುದು. ಇಲ್ಲಿರುವ ಮಿಲ್ಗಳಿಂದ ರಾಚುವ ಧೂಳು, ಹೊಗೆಯಿಂದ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಸ್ಥಳದಲ್ಲಿದ್ದ ಉಮೇಶ ಮುದ್ನಾಳ್ ಗಮನಕ್ಕೆ ತರುತ್ತಿದ್ದಂತೆ ಮಿಲ್ಗಳ ದಾಖಲೆ ಪರಿಶೀಲಿಸಿ ಕ್ರಮ ಜರುಗಿಸುವ ಭರವಸೆಯನ್ನು ಚವ್ಹಾಣ್ ನೀಡಿದರು.
ನಗರಸಭೆ ಕಿರಿಯ ಆರೋಗ್ಯ ನಿರೀಕಿ ಶರಣಮ್ಮ, ಡಾ.ಎಸ್.ಎಸ್. ನಾಯಕ, ನಿಜಾಮುದ್ದಿನ್, ಭೀಮಾಶಂಕರ, ಪವನ್, ಮಾರೆಪ್ಪ, ಬಸವರಾಜ, ಮಲ್ಲೆಶಿ, ರಾಜಪ್ಪ, ರಾಜು, ಜೋಗಿ, ಅರ್ಜುನ್, ರಾಜು ಪೂಜಾರಿ, ಅಬ್ದುಲ್ ಸಮದ್, ರಾಜು ಪಾಟೀಲ್, ಅರ್ಜುನ್ ರಾಠೋಡ್, ಬಸವರಾಜ ಕುಂಬಾರ ಇತರರಿದ್ದರು.
ಜಿಲ್ಲಾ ಕೇಂದ್ರದ ಈ ವಾರ್ಡ್ ಹಲವಾರು ವರ್ಷಗಳಿಂದ ಕನಿಷ್ಠ ಮೂಲಸೌಲಭ್ಯಗಳಿಲ್ಲದೆ ಹಾಳಾರು ಕೊಂಪೆಯಾಗಿದ್ದನ್ನು ಮನಗಂಡು ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ್ ನಗರಸಭೆಗೆ ಮನವಿಪತ್ರ ಸಲ್ಲಿಸಿದ್ದಕ್ಕೆ ಪೌರಾಯುಕ್ತರ ಮೂಲಕ ಸ್ಪಂದನೆ ಸಿಕ್ಕಂತಾಗಿದೆ.