Industrial waste is seeping into the groundwater.
ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಔಷಧ ಉತ್ಪಾದನಾ ಟಕವೊಂದರ ತ್ಯಾಜ್ಯ ನೀರನ್ನು ಅವೈಜ್ಞಾನಿಕವಾಗಿ ಹರಿಬಿಡುತ್ತಿದ್ದು, ಸುತ್ತಮುತ್ತಲಿನ ಪರಿಸರ ಮತ್ತು ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಸ್ಥಳಿಯ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಕೈಗಾರಿಕಾ ಪ್ರದೇಶವಾದಾಗ ಉದ್ಯೋಗ ಸಿಕ್ಕಿ ಜೀವನಮಟ್ಟ ಸುಧಾರಿಸಬಹುದು ಎಂಬ ಭರವಸೆ ಇತ್ತು. ಆದರೆ ಈಗ ಕಾರ್ಖಾನೆಗಳು ಬಿಡುವ ತ್ಯಾಜ್ಯ ನೀರು ಮತ್ತು ವಿಷಯುಕ್ತ ಹೊಗೆಯಿಂದ ಜೀವನವೇ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಣ ಸೂಕ್ತ ಕ್ರಮ ಕೈಗೊಳ್ಳಬೇಕು.
— ಶ್ರೀನಿವಾಸ್, ಸ್ಥಳಿಯ ನಿವಾಸಿ
ಕಾರ್ಖಾನೆಯಲ್ಲಿ ಶೇಖರಣೆಯಾಗುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ವೈಾನಿಕವಾಗಿ ಸಂಸ್ಕರಿಸದೆ, ಕಂಪನಿಯ ಆವರಣದ ಗೋಡೆಯ ಮೂಲಕ ನೇರವಾಗಿ ಪಕ್ಕದ ಹಳ್ಳಕ್ಕೆ ಹರಿಸಲಾಗುತ್ತಿದೆ. ಈ ಕಲುಷಿತ ನೀರು ಕೆರೆ ಹಾಗೂ ಅಂತರ್ಜಲ ಸೇರುತ್ತಿದ್ದು, ಈ ಭಾಗದ ಕೃಷಿ, ಪಶು&ಪಗಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭವಿಷ್ಯದಲ್ಲಿ ಕೊಳವೆಬಾವಿ ನೀರು ಸಂಪೂರ್ಣ ವಿಷಯುಕ್ತವಾಗುವ ಭೀತಿ ಎದುರಾಗಿದೆ.
ನಾವು ಯಾವುದೇ ರೀತಿಯ ರಾಸಾಯನಿಕ ತ್ಯಾಜ್ಯವನ್ನು ಪರಿಸರಕ್ಕೆ ಬಿಡುತ್ತಿಲ್ಲ. ಕಾರ್ಖಾನೆಯ ಅಡುಗೆ ಕೋಣೆಯ ಬಳಸಿದ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ.
— ವೆಂಕಟೇಶ್, ಕಾರ್ಖಾನೆ ನಿರ್ವಾಹಕ ಅಧಿಕಾರಿ
ಅಧಿಕಾರಿಗಳ ಕಣ್ಣೊರೆಸುವ ತಾಂತ್ರಿಕತೆ: ಪರಿಸರ ನಿಯಂತ್ರಣ ಮಂಡಳಿ, ಪೊಲೀಸ್, ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ ತಪಾಸಣೆಯ ನಾಟಕವಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸುವ ಸ್ಥಳಿಯರಿಗೆ ಸಣ್ಣ&ಪುಟ್ಟ ಗುತ್ತಿಗೆ ನೀಡಿ ಅಥವಾ ವೈಯಕ್ತಿಕ ಆಸೆ ಈಡೇರಿಸಿ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಕೆಲವೊಮ್ಮೆ ಕಲುಷಿತ ನೀರಿಗೆ ಟ್ಯಾಂಕರ್ ನೀರು ಬೆರೆಸಿ ಹರಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ತಂತ್ರವನ್ನೂ ಕಾರ್ಖಾನೆ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಗ್ರಾಮಸ್ಥರ ಅರೋಪಿಸಿದ್ದಾರೆ.