ಕನಕಪುರ ತಾಲೂಕಿನ ಸಂಗಮ ರಸ್ತೆಯ ಏಳಗಳ್ಳಿಬಳಿ ರೋಟರಿ ಮೇಕೆದಾಟು ಸಂಗಮದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ರೋಟರಿ ಮೇಕೆದಾಟು ಸಂಗಮದ ಸಂಸ್ಥಾಪಕ ಅಧ್ಯಕ್ಷ ರವಿ, ಸಲಹೆಗಾರ ಕೆ.ಎನ್. ಶಿವಕುಮಾರ್ ಸಿದ್ದಪ್ಪಾಜಿ, ಮಲ್ಲೇಶ್, ಕಾಂತರಾಜು, ಗೋಪಾಲ್, ರಾಘವೇಂದ್ರ, ಇನಾಮ್ದಾರ್ ಇದ್ದರು. 
ರಾಜ್ಯ

ರೋಟರಿ ಮೇಕೆದಾಟು ಸಂಗಮದ ಪದಾಧಿಕಾರಿಗಳ ಪದಗ್ರಹಣ

ಕನಕಪುರ :

ತಾಲೂಕಿನ ರೋಟರಿ ಮೇಕೆದಾಟು ಸಂಗಮದ ನೂತನ ಅಧ್ಯಕ್ಷರಾಗಿ ಬಿ.ಎಸ್ ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಸುರೇಶ್ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.

ನಡೆಯಿತು.

ಜಿಲ್ಲಾ ಪಿಜಿಡಿ ಸತೀಶ್ ಮಾಧವನ್ ಮಾತನಾಡಿ, ಸಮಾಜದಲ್ಲಿ ನೊಂದವರ ಬಾಳಿಗೆ ಬೆಳಕಾಗಬೇಕು. ಬಡವರು ಹಾಗೂ ಅಗತ್ಯ ಇರುವವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ರೋಟರಿ ಸಂಸ್ಥೆ ಸದಾ ಸೇವೆಗೆ ಸಿದ್ಧ ಎಂದರು.
ನೂತನ ಅಧ್ಯಕ್ಷ .ಬಿ.ಎಸ್. ರಮೇಶ್, ಜಿಲ್ಲಾ ಮೆಂಟರ್ ಕುಮಾರಸ್ವಾಮಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ರೋಟರಿ ಸಂಸ್ಥೆಯಿಂದ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಹಿತ್ಯ, ಆರೋಗ್ಯ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ರೋಟರಿ ಮೇಕೆದಾಟು ಸಂಗಮದ ಸಂಸ್ಥಾಪಕ ಅಧ್ಯಕ್ಷ ರವಿ, ರೋಟರಿ ಸಲಹೆಗಾರ .ಕೆ.ಎನ್ ಶಿವಕುಮಾರ್ ಸಿದ್ದಪ್ಪಾಜಿ, ಮಲ್ಲೇಶ್, ಕಾಂತರಾಜು, ಗೋಪಾಲ್, ರಾಘವೇಂದ್ರ, ಇನಾಮ್ದಾರ್ ಇತರರು ಇದ್ದರು.