ನಾಗನೂರ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು. ಮಾಜಿ ಸಚಿವ ಆರ್.ಎಂ.ಪಾಟೀಲ, ಬಿ.ಆರ್.ಪಾಟೀಲ, ಕೆ.ಎಸ್.ಪಾಟೀಲ, ಗಜಾನನ ಯರಗಣವಿ, ಪಿ.ಎಲ್.ಬಬಲಿ, ಸುಭಾಸ ಕ್ಯಾತೆನ್ನವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡಲಗಿ
ನಾಗನೂರ ಪಟ್ಟಣದ ಅಭಿವದ್ಧಿಗೆ ಸರ್ಕಾರದಿಂದ ಅನುದಾನ ನಿರೀಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ಬಸ್ ನಿಲ್ದಾಣದ ಬಳಿ ಶನಿವಾರ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಅಭಿವದ್ಧಿಗೆ ಸದಾ ಬದ್ಧತೆಯಿಂದ ಕಾರ್ಯ ನಿರ್ವಹಿಸಲಾಗುತ್ತಿದೆ. ಬಡವರಿಗಾಗಿ ಅತಿ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಗುಣಮಟ್ಟದ ಊಟ ಮತ್ತು ಉಪಹಾರ ದೊರೆಯಲಿದೆ. ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು.
ಮಾಜಿ ಸಚಿವ ಆರ್.ಎಂ.ಪಾಟೀಲ, ಬಿ.ಆರ್.ಪಾಟೀಲ, ಪ್ರಭಾ ಶುಗರ್ಸ್ ನಿರ್ದೇಶಕ ಕೆ.ಎಸ್.ಪಾಟೀಲ, ಗಜಾನನ ಯರಗಣವಿ, ಪಿ.ಎಲ್.ಬಬಲಿ, ಸುಭಾಸ ಕ್ಯಾತೆನ್ನವರ, ಮುತ್ತೆಪ್ಪ ಮುತ್ತೆನ್ನವರ, ರಮೇಶ ಬೆಳಕೂಡ, ಬಸು ಹಳಿಗೌಡರ, ಶಂಕರ ದಳವಾಯಿ, ಬಸವರಾಜ ಪಾಟೀಲ, ಮಹಾದೇವ ನಾಯಿಕ, ವೈ.ಆರ್. ಕರಬನ್ನವರ, ಬಸವಂತ ಪಡದಲ್ಲಿ, ಅಜ್ಜಪ್ಪ ಗೋಟೂರ, ಲಗಮಣ್ಣ ಗಡ್ಡಿ ಇತರರಿದ್ದರು.