ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ
- ದೇಶದಲ್ಲಿ ತನ್ನದೇ ತಂತ್ರಜ್ಞಾನ ಮತ್ತು ಅಸ್ಮಿತೆಯನ್ನು ಹೊಂದಿದಾಗ ಮಾತ್ರ ಅಭಿವೃದ್ಧಿಯಲ್ಲಿ ಸಾಗಲು ಸಾಧ್ಯ
- ಕಳೆದ ಐದು ವರ್ಷದಲ್ಲಿ ನಮ್ಮ ರಫ್ತು ಎಂಟು ಪಟ್ಟು ಪರಿವರ್ತಿಸಿದೆ.
- ಬುಲೆಟ್ ಪ್ರೂಫ್ ಜಾಕೆಟ್‌ನಿಂದ ಕ್ಷಿಪಣಿಗಳವರೆಗೆ, ಧನುಷ್‌ನಿಂದ ಪ್ರಚಂಡ್‌ವರೆಗೆ, ಭಾರತೀಯ ರಕ್ಷಣಾ ಮಾರುಕಟ್ಟೆ ಇಂದು ಇಡೀ ಜಗತ್ತಿಗೆ ಸವಾಲು ಹಾಕಲು ಸಜ್ಜಾಗಿದೆ
ಬೆಂಗಳೂರು: ಭಾರತೀಯ ರಕ್ಷಣಾ ಮಾರುಕಟ್ಟೆಯು ಇಂದು ಇಡೀ ಜಗತ್ತಿಗೆ ಸವಾಲು ಹಾಕಲು ಸಜ್ಜಾಗಿದೆ ಎಂದು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ (ಡಿಆರ್‌ಡಿಒ) ಮಹಾನಿರ್ದೇಶಕ ಡಾ. ಬಿನಯ್‌ಕುಮಾರ್ ದಾಸ್ ತಿಳಿಸಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ತನ್ನದೇ ತಂತ್ರಜ್ಞಾನ ಮತ್ತು ಅಸ್ಮಿತೆಯನ್ನು ಹೊಂದಿದಾಗ ಮಾತ್ರ ಅಭಿವೃದ್ಧಿಯಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.
ಸುಧಾರಿತ ತಂತ್ರಜ್ಞಾನಗಳು ನಮ್ಮ ರಫ್ತು ವಹಿವಾಟನ್ನು ಹೆಚ್ಚಿಸುತ್ತವೆ. ಕಳೆದ ಐದು ವರ್ಷದಲ್ಲಿ ನಮ್ಮ ರಫ್ತು ಎಂಟು ಪಟ್ಟು ಪರಿವರ್ತಿಸಿದೆ. ಬುಲೆಟ್ ಪ್ರೂಫ್ ಜಾಕೆಟ್‌ನಿಂದ ಕ್ಷಿಪಣಿಗಳವರೆಗೆ, ಧನುಷ್‌ನಿಂದ ಪ್ರಚಂಡ್‌ವರೆಗೆ, ಭಾರತೀಯ ರಕ್ಷಣಾ ಮಾರುಕಟ್ಟೆ ಇಂದು ಇಡೀ ಜಗತ್ತಿಗೆ ಸವಾಲು ಹಾಕಲು ಸಜ್ಜಾಗಿದೆ. ಭಾರತದ ಸೆಮಿಕಂಡಕ್ಟರ್ ಮಿಷನ್ ದೊಡ್ಡ ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ಮಿಷನ್ ಫಾರ್ ಗ್ರೀನ್ ಹೈಡ್ರೋಜನ್ ಮತ್ತು ಪಿಎಲ್‌ಐ ಮಿಷನ್‌ಗಳು ನವ ಭಾರತವನ್ನು ಮರು ವ್ಯಾಖ್ಯಾನಿಸಲು ದಾಪುಗಾಲಿಡುತ್ತಿವೆ. ವೇದ-ಉಪನಿಷತ್ತುಗಳಿಂದ ಆಧುನಿಕ ಶಸಾಸಗಳನ್ನು ಹೊತ್ತ ಯುದ್ದ ವಿಮಾನ ತೇಜಸ್ ದೇಶದ ಶಕ್ತಿಯಾಗಿದೆ ಎಂದರು.
ಹೊಸ ತಂತ್ರಜ್ಞಾನ ಕರಗತವಾಗಲಿ:
ಇಂದು ಯುದ್ದದ ವ್ಯಾಖ್ಯಾನವು ವಿಶ್ವಾದ್ಯಂತ ಬದಲಾಗುತ್ತಿರುವುದರಿಂದ ಇಡೀ ಯುದ್ದದ ಕಾರ್ಯಾಚರಣೆಯು ಸಾಕಷ್ಟು ವಿಭಿನ್ನವಾಗಿದೆ. ಸವಾಲನ್ನು ಸ್ವೀಕರಿಸಲು ಮತ್ತು ಮುಂದೆ ಸಾಗಲು ಸಜ್ಜಾಗಬೇಕಿದೆ. ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್ ನಮ್ಮ ರಕ್ಷಣೆಗೆ ಬರುತ್ತದೆ. ಈ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಂಡು ಭಾರತವನ್ನು ಜಾಗತಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ನಮ್ಮ ಗುರಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ. ರಮೇಶ್, ಕುಲಸಚಿವ ನವೀನ್ ಜೋಸ್ೆ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
2027ಕ್ಕೆ ಶೇ.25ರಷ್ಟು ಉದ್ಯೊಗ ಕಡಿತ: ಎಚ್ಚರಿಕೆ
ವೃತ್ತಿಪರ ಮಾರುಕಟ್ಟೆಯಲ್ಲಿ 2027ರ ವೇಳೆಗೆ ಶೇ.25ರಷ್ಟು ಉದ್ಯೋಗ ಕಡಿತವಾಗಬಹುದು. ಆದ್ದರಿಂದ ಯುವಕರು ಹೊಸ ಕ್ಷೇತ್ರದತ್ತ ಯೋಚಿಸಬೇಕಿದೆ. ಎರಡನೇ ಮಹಾಯುದ್ದದ ನಂತರ ಜಪಾನ್ ಹೇಗೆ ಉತ್ತುಂಗಕ್ಕೆ ಏರಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಕೆಲಸ ಬಿಟ್ಟು ಬೇರೇನೂ ಅರ್ಥವಾಗುವುದಿಲ್ಲ. ತಮ್ಮನ್ನು ತಾವು ಕೆಲಸದಿಂದ ಗುರುತಿಸಿಕೊಳ್ಳಬೇಕಿದೆ ಎಂದು ಡಾ. ಬಿನಯ್‌ಕುಮಾರ್ ದಾಸ್ ತಿಳಿಸಿದರು.