ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರತ್​ ಬಚ್ಚೇಗೌಡ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ್​ ಸೋಮಶೇಕರ್​, ಇಒ ಮುನಿಯಪ್ಪ, ಡಿವೈಎಸ್​ಪಿ ಮಲ್ಲೇಶ್​, ಬಿಇಒ ಪದ್ಮನಾಭ್​, ಪೌರಾಯುಕ್ತ ನೀಲಾ ಲೋಚನ ಪ್ರಭು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್​ ಮೂರ್ತಿ ಇತರರು ಇದ್ದರು. 
ರಾಜ್ಯ

ಭಾರತ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ / HOSAKOTE

ಹೊಸಕೋಟೆ : ದೇಶದಲ್ಲಿ ಸಂವಿಧಾನವನ್ನು ಮೂಲೆಗುಂಪನ್ನಾಗಿಸುವ ಕೆಲ ಕೃತ್ಯಗಳು ನಡೆಯುತ್ತಿವೆ ಎಂದು ಶಾಸಕ ಶರತ್​ ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠ ಹಾಗೂ ಸುಂದರ ಸಂವಿಧಾನವಾಗಿದ್ದು, ಸಮಾನತೆ ಬ್ರಾತೃತ್ವ ಹಾಗೂ ಸ್ವತಂತ್ರವನ್ನು ಸಮಾನವಾಗಿ ನೀಡಿದೆ ಎಂದು ತಿಳಿಸಿದರು.
ದೇಶದಲ್ಲಿ ಸಾಕ್ಷರತಾ ಪ್ರಮಾಣ ಶೇ. 85 ಆಗಬೇಕಾದರೆ, ಮಹಿಳಾ ಸಬಲೀಕರಣ, ವ್ಯಕ್ತಿ ಗೌರವ, ಸ್ವಾಭಿಮಾನ ಇವೆಲ್ಲ ಉಳಿಯ ಬೇಕಾದರೆ ಸಂವಿಧಾನವೇ ಕಾರಣ. ರಾಜ್ಯ ಪಾಲರು ಭಾಷಣ ಮಾಡದೇ ಅರ್ಧಕ್ಕೆ ಮೊಟುಕುಗೊಳಿಸಿದ್ದನ್ನು ನೋಡಿದ್ದೇವೆ. ಮನರೇಗಾ ಯೋಜನೆಯಿಂದ ಶೇ.60 ಮಹಿಳೆಯರಿಗೆ ದೊರೆಯಬೇಕಿದ್ದ ಪಾಲನ್ನು ರಾತ್ರೋ ರಾತ್ರಿ ಬದಲಿಸಲಾಗಿದೆ. ಇದೇ ಮುಂದುವರಿದರೆ ನಮ್ಮ ಸಂವಿಧಾನಕ್ಕೆ ಸಂಕಷ್ಟ ಕಂಡಿತ. ಪ್ರತಿ ವರ್ಷ ಪ್ರತಿಯೊಬ್ಬರೂ ಸಂವಿಧಾನವನ್ನು ಪಾಲಿಸಿ ಎಂದರು.
ತಹಸೀಲ್ದಾರ್​ ಸೋಮಶೇಕರ್​ ಮಾತನಾಡಿ, ವರ್ಷದಲ್ಲಿ 30 ರಿಂದ 40 ಜಯಂತಿಗಳ ಆಚರಣೆ ಮಾಡುತ್ತಿದ್ದು, ದೇಶದಲ್ಲಿ ಗಣರಾಜ್ಯೋತ್ಸವ ಜಯಂತಿಗಳ ಪಿತಾಮಹ ಎಂದರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳಿಂದ ಪಥ ಸಂಚಲನ, ಸಾಂಸತಿಕ ಕಾರ್ಯಕ್ರಮ, ಸಾಧಕರನ್ನು ಸನ್ಮಾನಿಸಲಾಯಿತು.

ತಾಲೂಕಿಗೆ ಮೆಟ್ರೋ ತರುವ ಉದ್ದೇಶ ಬಲವಾಗಿದ್ದು, ಈಗಾಗಲೆ ಡಿಪಿಆರ್​ಗೆ ಅನುಮೋದನೆ ದೊರೆತಿದೆ. ಕೆಆರ್​ ಪುರ ಮಾರ್ಗವಾಗಿ ಹೊಸಕೋಟೆಗೆ ಮೆಟ್ರೋ ಬರಲಿದೆ. 140 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 55 ಕೆರೆಗಳಿಗೆ 55 ಎಂಎಲ್​ಡಿ ನೀರು ಹರಿಸಲಾಗುವುದು. ಆರೋಗ್ಯ ಭಾಗ್ಯವಾಗಿ 100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಹಾಗೂ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಿದ್ಧವಾಗುತ್ತಿದ್ದು, ಶ್ರೀವೇ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೇ ಕಸ ಮುಕ್ತ, ಗಲಾಟೆ ದೊಂಬಿ ಮುಕ್ತ ಹಾಗೂ ಕ್ರೆಂ ಪ್ರೀ ಹೊಸಕೋಟೆಯನ್ನು ಶ್ರೀದಲ್ಲೇ ಗುರಿಸಾಧನೆ ಮಾಡಲಾಗುವುದು.