ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಹಿಂದೂ ಜಾಗೃತಿ ಸಮಾವೇಶವನ್ನು ಜಮಖಂಡಿಯ ಶ್ರೀ ಗುರುಪ್ರಸಾದ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀಕಾಂತ ಶೆಟ್ಟಿ, ವಸಂತ ಇಟಗಿ ಇದ್ದರು.
- ಹಿಂದೂ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಅನಿಸಿಕೆ
- ಚಿಂಚೋಳಿಯಲ್ಲಿ ಶಿವಾಜಿ ಜಯಂತ್ಯುತ್ಸವ
ಚಿಂಚೋಳಿ: ಹತ್ತು ವರ್ಷ ಮಗು ಶಿವಾಜಿ ಅವರನ್ನು ಶಾಹಜೀ& ಜೀಜಾಬಾಯಿ ಅವರು ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ಕಳಿಸಿದ್ದನ್ನು ನಾವೆಲ್ಲರೂ ಸ್ಮರಿಸಬೇಕು. ಭವಿಷ್ಯದಲ್ಲಿ ಭಾರತ ಜಗತ್ತಿನ ಗುರುವಾಗಲಿದೆ ಎಂದು ಮಂಗಳೂರಿನ ಹಿಂದೂ ಕಾರ್ಯಕರ್ತ ಶ್ರೀಕಾಂತಶೆಟ್ಟಿ ಕಾರ್ಕಳ ಹೇಳಿದರು.
ವೈಜನಾಥ ಪಾಟೀಲ್ ಸ್ಮಾರಕ ಆವರಣದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಯುವಕ ಸಂದಿಂದ ಹಮ್ಮಿಕೊಂಡಿದ್ದ 396ನೇ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ, ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ತಡೆಯುವ ತಾಕತ್ತು ಯಾರಿಗೆ ಇರಲ್ಲ ಎಂಬುದನ್ನು ಯುವ ಪೀಳಿಗೆ ಅರಿಯಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರು 50 ವರ್ಷ ಬದುಕಿ 500 ವರ್ಷಗಳ ಇತಿಹಾಸ ನಿರ್ಮಿಸಿದ್ದಾರೆ. ಶ್ರೀಶೈಲದಲ್ಲಿ ಜೀವಂತ ಕಾಲದಲ್ಲಿಯೇ ಆಂಧ್ರಪ್ರದೇಶ ಜನತೆ ಶಿವಾಜಿ ಮೂರ್ತಿ ಸ್ಥಾಪನೆ ಕಾಣಬಹುದಾಗಿದೆ. ಯಾದವಾಡ ಆಂಜನೇಯ ದೇವಾಲಯದಲ್ಲಿ ಬೆಳವಡಿ ಮಲ್ಲಮ್ಮ ಹೋರಾಟ ಕಂಡು ಬೆರಗಾದ ಶಿವಾಜಿ ಆದರ್ಶ ಶಾಸನ ಕಾಣಬಹುದಾಗಿದೆ. ಹಿಂದೂ ಧರ್ಮ ಹೊಸ ದಿಕ್ಕನ್ನು ನೀಡಿದ ಕಿರ್ತಿ ಛತ್ರಪತಿ ಶಿವಾಜಿಗೆ ಸಲ್ಲುತ್ತದೆ ಎಂದು ಹೇಳಿದರು.
ಶಿವಾಜಿ ಹಿಂದೂ ಸಾಮ್ರಾಜ್ಯ ನಿರ್ಮಿಸಿದ್ದು, 280 ಕೋಟೆಗಳ ಮೇಲೆ ಹಿಂದೂ ಸ್ವರಾಜ್ಯ ಧ್ವಜ ಸ್ಥಾಪಿಸಿದರು. ಸಾರಾಯಿ, ಪ್ರೀತಿ, ಪ್ರೇಮದ ಪಾಶಕ್ಕೆ ಬಲಿಯಾಗುತ್ತಿರುವು ನಮಗೆಲ್ಲರಿಗೂ "ಛಾವ' ಚಿತ್ರ ಪ್ರೇರಣೆಯಾಗಬೇಕು. ಛತ್ರಪತಿ ಸಂಭಾಜೀ ಮಹಾರಾಜರ ದೇಶ, ಧರ್ಮ ಪ್ರೇಮ ಮೈಗೂಡಿಸಿಕೊಳ್ಳಬೇಕು. ಇದೀಗ ವಿದೇಶದಲ್ಲಿ ಯುದ್ಧ ನಡೆಯುತ್ತಿದೆ, ನಾವೆಲ್ಲರೂ ಇಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಬಾಳುತ್ತಿದ್ದೇವೆ. ನಾವೆಲ್ಲರೂ ರಾಮ ಹಾಗೂ ಕೃಷ್ಣನ ಆದರ್ಶ ಪಾಲಿಸುತ್ತಿದ್ದೇವೆ ಎಂದು ತಿಳಿಸಿದರು.
ನರನಾಳದ ಶ್ರೀ ಶಿವಕುಮಾರ ಸ್ವಾಮೀಜಿ, ಜಮಖಂಡಿಯ ಶ್ರೀ ಗುರುಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ವಸಂತ ಇಟಗಿ, ಆನಂದ ಗೌಳಿ, ಕಿರಣ ಪಂಚಾಳ, ಹಣಮಂತ, ಸಂಕೇತ ಬಬಲಾದಿ, ಅಶೋಕ ಮೊಗ್ದಂಪುರ, ಅಶೋಕ ಪಾಟೀಲ್, ಗೌತಮ ಪಾಟೀಲ್, ಅನೀಲಕುಮಾರ ಕಂಟ್ಲಿ, ಶಿವಯೋಗಿ ರುಸ್ತಂಪುರ, ಶ್ರೀಹರಿ ಕಾಟಾಪುರ, ವೀರೇಶ ಯಂಪಳ್ಳಿ, ಬಸವರಾಜ ಕೊಡಂಬುಲ್, ಶಂಕರ ಸುಲೇಪೇಟ, ಕರಿಬಸವ ದೇಶಮುಖ, ರಮೇಶ ಎಲಕಪಳ್ಳಿ, ವಿರಾಟ ಪಾಟೀಲ್, ಸಂತೋಷ ಗಡಂತಿ, ಮಹಾಂತೇಶ, ಶಂಕರ, ಮಹೇಶ ಭೋವಿ, ವಿರೇಶ, ರೇವಣಸಿದ್ದಪ್ಪ ಮೋಘಾ, ಶರಣು ನಾಟೀಕಾರ ಇತರರಿದ್ದರು.
ಅಭಿಶ್ರೀ ವಿ. ಮಠಪತಿ ಅವರ ನೃತ್ಯ ನೋಡುಗರ ಗಮನ ಸೆಳೆದರು.
ಗ್ರಂಥ, ಕಾವ್ಯ, ವೇದ, ಪಂಚಾಂಗ, 18 ಪುರಾಣ ಜಗತ್ತಿಗೆ ನೀಡಿದ ಕೀರ್ತಿ ಭಾರತದ್ದು. ಸಂಕ್ರಮಣ, ಯುಗಾದಿ ಹಬ್ಬದ ಎಳ್ಳು&ಬೆಲ್ಲ, ಬೇವು&ಬೆಲ್ಲ ವೈಶಿಷ್ಟ ಕುರಿತು ಸಮಾಜಕ್ಕೆ ಪರಿಚಯಿಸಬೇಕು. ಮುಸ್ಲಿಂ ದಾಳಿಕೋರರು ನಳಂದಾ ವಿಶ್ವವಿದ್ಯಾಲಯಕ್ಕೆ ಬೆಂಕಿ ಇಟ್ಟಿದ್ದು, ಸೋಮನಾಥ ದೇವಾಲಯವನ್ನು 16 ಬಾರಿ ಧ್ವಂಸ ಮಾಡಿದ್ದನ್ನು ಸ್ಮರಿಸಬೇಕು. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಘೋಷವಾಕ್ಯ ಅರಿತು ಬಾಳೋಣ.
> ಶ್ರೀ ಗುರುಪ್ರಸಾದ ಸ್ವಾಮೀಜಿ,
ಪಾಕಿಸ್ತಾನ ದೇಶವನ್ನು ನಾಲ್ಕು ತುಂಡಾಗಿ ವಿಭಜನೆ ಮಾಡುವ ರಾಜತಾಂತ್ರಿಕತೆ ನಡೆಸಲಾಗುತ್ತಿದೆ. ದೇಶದ ಒಳಗಡೆ ಇರುವ ದೇಶದ್ರೋಹಿಗಳಿಂದ ಎಲ್ಲರೂ ಜಾಗೃತರಾಗಿರಬೇಕು. ಈ ಹಿಂದೆಯೇ ಜಿನ್ನಾ ಪ್ರತ್ಯೇಕ ದೇಶ ನಿರ್ಮಿಸಿದ್ದು, ದೇಶ ಭಕ್ತಿ, ದೇಶದ ಸರ್ಕಾರದ ನೀತಿ ಪಾಲಿಸದವರು ಭಾರತದಿಂದ ಹೊರ ನಡೆಯಬೇಕು.>