Citizens Get Test Alert 
ರಾಜ್ಯ

ಮೊಬೈಲ್​ ವೈಬ್ರೇಟ್​, ಎಮರ್ಜೆನ್ಸಿ ಮೆಸೇಜ್​ ಬಂದ್ರೆ​ ಭಯ ಬೇಡ; ಇದು ಕೇಂದ್ರದ ಪರೀಕ್ಷಾರ್ಥ ಪ್ರಯೋಗ..Citizens Get Test Alert

ಪ್ರಮುಖ ಮುಖ್ಯಾಂಶಗಳು

  • ಅಲರ್ಟ್​ ಮೆಸೇಜ್​​​, ಒಂದೇ ಸಮನೇ ಫೋನ್​ ವೈಬ್ರೇಶನ್​ನಿಂದ ಆತಂಕಕ್ಕೊಳಗಾದ ಜನರು
  • ಪರೀಕ್ಷಾರ್ಥ ಪ್ರಯೋಗ ಮಾತ್ರ ಯಾರು ಭಯಪಡುವ ಅಗತ್ಯವಿಲ್ಲ ಎಂದ ಭಾರತ ಸರ್ಕಾರ
  • ಭೂಕಂಪ, ಯುದ್ಧದ ಸಮಯದಲ್ಲಿ ಜನರಿಗೆ ಎಚ್ಚರಿಕೆ ನೀಡುವ ಸಲುವಾಗಿ ಹೊಸ ವ್ಯವಸ್ಥೆ ಜಾರಿಗೆ ತರಲು ತಯಾರಿ
ನವದೆಹಲಿ: ಶನಿವಾರ ಮುಂಜಾನೆ 11:55ಕ್ಕೆ ಸರಿಯಾಗಿ ಒಂದೇ ಸಮನೇ ಇದ್ದಕ್ಕಿದ್ದಂತೆ ಫೋನ್​ ರಿಂಗಣಿಸಲು ಶುರುವಿಟ್ಟುಕೊಂಡಿತ್ತು. ವೈಬ್ರೇಟ್​ ಆಗುತ್ತಿತ್ತು. ಇದೇನು ಎಂದು ಅಘಾತಕ್ಕೊಳಗಾದ ಭಾರತದ ಕೋಟ್ಯಾಂತರ ಜನರು ಕೈನಲ್ಲಿದ್ದ ಮೊಬೈಲ್​​ ನೋಡಿಕೊಂಡಾಗ ಕಾಣಿಸಿದ್ದು ಕೇಂದ್ರ ಸರ್ಕಾರದ ಒಂದು ಸಂದೇಶ. ಇದು ತುರ್ತು ಸಂದೇಶವಲ್ಲ. ಕೇವಲ ಸೆಲ್​ ಬ್ರಾಡ್​ ಕಾಸ್ಟ್​​​ ವ್ಯವಸ್ಥೆಯ ಜಾರಿಗಾಗಿ ಕೈಗೊಂಡ ಪರೀಕ್ಷಾರ್ಥ ಪ್ರಯೋಗ ಎಂದು. ಇದನ್ನು ಕಂಡವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್​ಡಿಎಂಎ)ವು ಪ್ರವಾಹ ಮತ್ತು ಭೂಕಂಪ ಅತೀವೃಷ್ಟಿ ಸೇರಿದಂತೆ ಪ್ರಾಕೃತಿಕ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಎಚ್ಚರಿಕೆ ಸಂದೇಶ ರವಾನಿಸಲು ಸೆಲ್​ ಬ್ರಾಡ್​ಕಾಸ್ಟಿಂಗ್​ ಅಲರ್ಟ್​​​ ಸೇವೆಯ ಆರಂಭಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಅಧಿಕೃತ ಚಾಲನೆ

ಕೇಂದ್ರ ಗೃಹ ಸಚಿವ ಮತ್ತು ಜೋತಿರಾದಿತ್ಯ ಸಿಂಧಿಯಾ ಅವರು ಮೇ2ರಂದು ದೆಹಲಿಯಲ್ಲಿ ಸ್ವದೇಶಿ ವಿಪ್ಪತ್ತು ಸಂವಹನ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದಾರೆ. ಭಾರತದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ರಾಜ್ಯದಲ್ಲಿ ಇಂದು ಅಧಿಕೃತವಾಗಿ ಸಂದೇಶ ರವಾನಿಸಲಾಗಿದೆ.
ಫೋನ್​ನಲ್ಲಿದ್ದ ಸಂದೇಶವೇನು?
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಮ್ಮ ಭಾಗದಲ್ಲಿ 2026 ಮೇ 2ರಂದು ಬ್ರಾಡ್​ ಕಾಸ್ಟಿಂಗ್​ ಅಲರ್ಟ್​ ತಾಂತ್ರಿಕ ಪರೀಕ್ಷೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮೊಬೈಲ್​ಗೆ ಅಲರ್ಟ್​ ಬಂದಾಗ ಯಾರೂ ಯಾರು ಹೆದರುವ ಅವಶ್ಯಕತೆ ಇಲ್ಲ ಅಥವಾ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನಲಾಗಿದೆ. ಈ ವ್ಯವಸ್ಥೆ ಸಂಪೂರ್ಣ ಅನುಷ್ಠಾನಕ್ಕೆ ಬಂದಾಗ ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಡಾಟ್​ ಇಂಡಿಯಾ ಮೊದಲೇ ಮಾಹಿತಿ ನೀಡಿತ್ತು

ಫೋನ್​ನಲ್ಲಿ ಅಲರ್ಟ್​ ಮೆಸೇಜ್​ಗಳು ಬರಲಿವೆ ಎಂದು ಏಪ್ರಿಲ್​ 29ರಂದೇ ಡಾಟ್ ಇಂಡಿಯಾ ಮಾಹಿತಿಯನ್ನು ಹಂಚಿಕೊಂಡಿತ್ತು. ನಿಮ್ಮ ಮೊಬೈಲ್​ ಒಮ್ಮೆಲೆ ವೈಬ್ರೇಟ್ ಆಗಬಹುದು ಆದರೆ, ಭಯ ಪಡುವ ಅಗತ್ಯವಿಲ್ಲ ಇದು ದೇಶಾದ್ಯಂತ ತ್ವರಿತ, ಭೂ-ಉದ್ದೇಶಿತ ವಿಪತ್ತು ಎಚ್ಚರಿಕೆಗಳನ್ನು ಸಕ್ರಿಯಗೊಳಿಸಲು ಭಾರತವು ತನ್ನ ಸ್ಥಳೀಯ ಸೆಲ್ ಪ್ರಸಾರ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ನಿಮ್ಮ ಮೊಬೈಲ್ ಸೆಟ್ಟಿಂಗ್‌ಗಳಲ್ಲಿ ಪರೀಕ್ಷಾ ಚಾನಲ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಇಂಗ್ಲಿಷ್,ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷಾ ಸಂದೇಶಗಳನ್ನು ಸ್ವೀಕರಿಸಬಹುದು. ಇದು ಕೇವಲ ಪರೀಕ್ಷಾರ್ಥ ಭಾಗವಾಗಿ ನಡೆಸುತ್ತಿರುವುದು ನೆನಪಿಡಿ ಎಂದು ಟ್ವೀಟ್ ಮಾಡಿತ್ತು.

ಸಚೇತ್​ ವ್ಯವಸ್ಥೆ

ಸಚೇತ್​ ಎನ್ನುವ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ತುರ್ತು ಸಂದರ್ಭದಲ್ಲಿ ಎಚ್ಚರಿಕೆ ನೀಡುವ ವ್ಯವಸ್ಥೆಯಾಗಿದೆ. ಇದು ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಶಿಫಾರಸು ಮಾಡಿದ 'ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್' ಆಧರಿಸಿದೆ, (ಏಜೆನ್ಸೀಸ್​).