ಸ್ವಾತಂತ್ರ್ಯದಿನಾಚರಣೆ ನಿಮಿತ್ತ ಬಸವಕಲ್ಯಾಣದ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಮಾತನಾಡಿದರು. ಬಿಇಟಿ ಅಧ್ಯಕ್ಷ ಬಸವರಾಜ ಪಾಟೀಲ ಅಟ್ಟೂರ, ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಹಾಗೂ ಪ್ರಮುಖರಿದ್ದರು. 
ರಾಜ್ಯ

ಪ್ರಗತಿ ಪಥದತ್ತ ಭಾರತ ದೇಶ

ಬಸವಕಲ್ಯಾಣ: ಭಾರತ ದೇಶ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಪಥದತ್ತ ಸಾಗುತ್ತಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಸಹ ಭಾರತ ದೇಶದ ಕಡೆಗೆ ಹಿಂತಿರುಗಿ ನೋಡುತ್ತಿವೆ. ಇದು ನಮ್ಮ- ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಬಿಇಟಿ ಉಪಾಧ್ಯಕ್ಷ, ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಹೇಳಿದರು. 80ನೇ ಸ್ವಾತಂತ್ರ್ಯ ದಿನಾಚಾರಣೆ ನಿಮಿತ್ತ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಬಸವಕಲ್ಯಾಣ ಎಜುಕೇಷನಲ್​ ಟ್ರಸ್ಟ್​ ನ ಅಧ್ಯಕ್ಷ ಬಸವರಾಜ ಪಾಟೀಲ ಅಟ್ಟೂರ ಉಪಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಮಾತೆಯ ಅನೇಕ ವೀರರು ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ್ದು, ತನ್ನ ಪ್ರಾಣದ ತ್ಯಾಗ-ಬಲಿದಾನ ಮಾಡಿದ್ದಾರೆ ಎಂದರು. ಬಿಇಟಿ ನಿರ್ದೇಶಕ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ, ಕಾಲೇಜನ ಕಚೇರಿಯ ಅಧೀಕ್ಷಕರು ವೃಷಿಕೇತ ಭೂಸಾರೆ, ಐಟಿಐ ಪ್ರಾಚಾರ್ಯ ಶಿವಕುಮಾರ ಹಿರೇಮಠ, ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ನಾಗಯ್ಯ ಸ್ವಾಮಿ ಮಾತನಾಡಿದರು. ಆರ್​.ಎಸ್​.ಪಾಟೀಲ ಸ್ವಾಗತಿಸಿದರು. ಸುಪ್ರೀಯಾ ವಂದಿಸಿದರು.ಮನೋಜಕುಮಾರ ಕೇರಳಿ ನಿರೂಪಣೆ ಮಾಡಿದರು.