ಚಿತ್ತಾಪುರದ ಮಹಾನಂದಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಮಹಾನಂದಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಕಂಬಳೇಶ್ವರ ಮಠದ ಶ್ರೀ ಸೋಮಶೇಕರ ಶಿವಾಚಾರ್ಯ ಮಾತನಾಡಿದರು. ನಾಗರಾಜ ಭಂಕಲಗಿ, ಶಾಂತಕುಮಾರ ಹತ್ತಿ ಇತರರಿದ್ದರು. 
ರಾಜ್ಯ

ದೇವರ ಪ್ರೀತಿಸುವ ದೇಶ ಭಾರತ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸೋಮಶೇಖರ ಶಿವಾಚಾರ್ಯ ನುಡಿ
  • ಚಿತ್ತಾಪುರದಲ್ಲಿ ಮಹಾನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಚಿತ್ತಾಪುರ : ವಿಶಿಷ್ಟ ಸಂಸತಿಯೊಂದಿಗೆ ದೇವರನ್ನು ಪ್ರೀತಿಸುವ ದೇಶ ಭಾರತ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಪಟ್ಟಣದ ಹೋಳಿಕಟ್ಟಿ ಬಡಾವಣೆಯ ಶ್ರೀ ಮಹಾನಂದಿ ದೇವಸ್ಥಾನದ ನವೀಕೃತ ಶಿಲಾ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಾನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇಶಕ್ಕೆ ರೈತ ಬೆನ್ನೆಲುಬು ಆಗಿದ್ದರೆ, ನಂದಿ ಬಸವಣ್ಣ ರೈತರ ಬೆನ್ನೆಲುಬು. ಕೃಷಿ ಚಟುವಟಿಕೆ ನಡೆಸಲು ನಂದಿ ಬಸವಣ್ಣನ ಅಗತ್ಯವಿದೆ ಎಂದರು.
ಕೆಳಗೆ ಬಿದ್ದವರನ್ನು ಮೇಲೆತ್ತುವ ಕೆಲಸ ಶ್ರೇಷ್ಠವಾದದ್ದು. ಆದರೆ ಅನೇಕ ವರ್ಷಗಳಿಂದ ಹಳೆಯದಾದ ನಂದಿ ಬಸವಣ್ಣ ಮೂರ್ತಿ ಭೂಮಿಯಲ್ಲಿ ಮುಳುಗಿದ್ದ. ಈಗ ಭಕ್ತರು ನೂತನ ಮೂರ್ತಿಯನ್ನು ಮತ್ತೆ ನಂದಿ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಶ್ಲಾನೀಯ. ಭಕ್ತಿಯಿದ್ದಲ್ಲಿ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಸಮಾಜದ ಏಳಿಗೆಗೆ ಪೂರಕವಾದ ಕೆಲಸ ನಿರಂತರ ನಡೆಯಬೇಕು ಎಂದರು.
ಶ್ರೀ ಮಹಾನಂದಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಶಾಂತಕುಮಾರ ಹತ್ತಿ ಅಧ್ಯಕ್ಷತೆ ವಹಿಸಿದ್ದರು. ನಾಗಾವಿ ಗೋಶಾಲೆ ಅಧ್ಯಕ್ಷ ರಮೇಶ ಬೊಮ್ಮನಹಳ್ಳಿ, ಪ್ರಮುಖರಾದ ಮಲ್ಲಿಕಾರ್ಜುನರೆಡ್ಡಿ ಇಜಾರ, ವೆಂಕಾರೆಡ್ಡಿ ಪಾಲಪ್​, ಸಿದ್ರಾಮರೆಡ್ಡಿ ಪಾಲಪ್​, ಬಸವರಾಜ ಹೂಗಾರ, ಸಂಜೀವರೆಡ್ಡಿ ಪಾಲಪ್​, ಅನೀಲ ವಡ್ಡಡಗಿ, ಬಸವರಾಜ ಕಾಳಗಿ, ಶ್ರೀನಿವಾಸ ಹಳ್ಳಿ, ಬಸವರಾಜ ಸಂಕನೂರ, ಮಲ್ಲರೆಡ್ಡಿ ಗೋಪಶೇನ್​, ಸಂಗಮೇಶ ರೋಣದ, ಶ್ರೀಕಾಂತ ಸುಲೇಗಾಂವ, ರಮೇಶ ಕಾಳನೂರ, ರವೀಂದ್ರ ಸಜ್ಜನಶೆಟ್ಟಿ, ಚಂದ್ರಶೇಖರ ಊಟಗೂರ ಇತರರಿದ್ದರು.
ಸಂತೋಷಕುಮಾರ ಹಾವೇರಿ ಸ್ವಾಗತಿಸಿದರು. ಪೂಜಾ ಭಂಕಲಗಿ ನಿರೂಪಣೆ ಮಾಡಿದರು. ಅಂಬರೇಶ ಸುಲೇಗಾಂವ ವಂದಿಸಿದರು. ಮುತೆದೆಯರಿಗೆ ಉಡಿ ತುಂಬಿ ಗೌರವಿಸಲಾಯಿತು. ಹೊನ್ನಕಿರಣಗಿಯ ಶ್ರೀ ರಾಚೋಟೇಶ್ವರ ವೈದಿಕ ಬಳಗದಿಂದ ನಡೆದ ಕಾಶಿ ವಿಶ್ವನಾಥ ೇತ್ರ ಶೈಲಿಯ ಮಹಾನಂದಿಗೆ ಮಹಾ ಆರತಿ ಜನಮನ ಸೆಳೆಯಿತು. ಮಂಜುನಾಥ ಶಾಸಿ, ಕರಬಸಯ್ಯ ಶಾಸಿ ಮಂತ್ರ ಪಠಣ ಮಾಡಿದರು. ಆಕಾಶವಾಣಿ ಕಲಾವಿದೆ ಸರಸ್ವತಿ ಸಬರದ, ವಿನಯಕುಮಾರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
"

ಸ್ವಾಮಿಗಳ ಶಕ್ತಿಗಿಂತ ಮುತೆದೆ ಶಕ್ತಿ ದೊಡ್ಡದು. ಮುತೆದೆಯರಿಗೆ ಉಡಿ ತುಂಬಿ ಗೌರವಿಸುವ ಭಾರತದಲ್ಲಿ ಅಭಿವೃದ್ಧಿ ಸಮೃದ್ಧಿ ಸಂಕೇತವಾಗಿದೆ. ಉತ್ತಮವಾದ ಮಳೆ ಬೆಳೆ ಬರುತ್ತದೆ. ಪ್ರತಿಯೊಬ್ಬರೂ ದೇಶದ ಸಂಸತಿ ಉಳಿಸಿಕೊಂಡು ಹೋಗಬೇಕು.

> ಶ್ರೀ ಸೋಮಶೇಖರ ಶಿವಾಚಾರ್ಯ

ಕಂಬಳೇಶ್ವರ ಮಠ