ಸ್ವಾತಂತ್ರ್ಯ ದಿನಾಚರಣೆಗೆ ಸ್ಪರ್ಧೆ 
ರಾಜ್ಯ

ಸ್ವಾತಂತ್ರ್ಯ ದಿನಾಚರಣೆ: ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಆಹ್ವಾನ, ಏನೆಲ್ಲ ಸ್ಪರ್ಧೆಗಳಿಗೆ, ಭಾಗವಹಿಸುವುದು ಹೇಗೆ?

ಪ್ರಮುಖ ಮುಖ್ಯಾಂಶಗಳು

  • 2047 ರೊಳಗೆ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಯ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ
  • ಪ್ರಬಂಧ ಹಿಂದಿಮತ್ತು ಇಂಗ್ಲಿಷ್ (ದ್ವಿಭಾಷೀಯ) ಆಗಿರಬೇಕು. ಮೊದಲ ಮೂರು ವಿಜೇತರಿಗೆ ತಲಾ 15,000 ರೂ. ನಗದು ಬಹುಮಾನ ನೀಡಲಾಗುತ್ತದೆ.
  • ಈ ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರಲ್ಲಿ 2047ರೊಳಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಎಐಯ ಮಹತ್ವದ ಪಾತ್ರದ ಬಗ್ಗೆ ಜಾಗೃತಿ
ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕವು ಸ್ವಾತಂತ್ರ್ಯ ದಿನಾಚರಣೆ - 2026ರ ಅಂಗವಾಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಉತ್ತೇಜಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಆನ್‌ಲೈನ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಜು.17ರವರೆಗೆ ಸಮಯವಕಾಶ ನೀಡಲಾಗಿದೆ.
2047 ರೊಳಗೆ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಯ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರಬಂಧ 500-600 ಪದಗಳ ಮಿತಿಯಲ್ಲಿರಬೇಕು. ಪ್ರಬಂಧ ಹಿಂದಿಮತ್ತು ಇಂಗ್ಲಿಷ್ (ದ್ವಿಭಾಷೀಯ) ಆಗಿರಬೇಕು. ಮೊದಲ ಮೂರು ವಿಜೇತರಿಗೆ ತಲಾ 15,000 ರೂ. ನಗದು ಬಹುಮಾನ ನೀಡಲಾಗುತ್ತದೆ.
ಈ ಸ್ಪರ್ಧೆಯ ಉದ್ದೇಶ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರಲ್ಲಿ 2047ರೊಳಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಎಐಯ ಮಹತ್ವದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ರಸಪ್ರಶ್ನೆಯಲ್ಲಿ ಭಾಗವಹಿಸುವ ಎಲ್ಲರಿಗೂ ಎಟ.ಜ್ಞಿ ಮೂಲಕ ಆನ್‌ಲೈನ್ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಸ್ಪರ್ಧೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಿ ಅವರನ್ನು ಭಾಗವಹಿಸುವಂತೆ ಉತ್ತೇಜಿಸಲು ಎಲ್ಲಾ ಶಾಲೆ/ಕಾಲೇಜುಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕ ಸೂಚಿಸಿದೆ.