ಬೇಲೂರು ತಾಲೂಕನ್ನು ತಕ್ಷಣ ಬರಪೀಡಿತ ಘೋಷಿಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂದೆ ಗುರುವಾರವೂ ಧರಣಿ ನಡೆಸಿದರು. ಹರ್ಷವರ್ಧನ್, ಸುನಿಲ್ ಬೆಳ್ಳೊಟ್ಟೆ, ರಿಯಾಜ್, ದೇವರಾಜ್, ಮನು, ಸುಷ್ಮಾ, ಆಶಾ, ಉಷಾ ಇತರರು ಇದ್ದರು.
ಬೇಲೂರು: ಬೇಲೂರು ತಾಲೂಕನ್ನು ಬರ ಪೀಡಿತ ಎಂದು ಘೋಷಿಸು ಭರವಸೆ ನೀಡಿದ ಹಿನ್ನಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್)ಪಕ್ಷದ ಕಾರ್ಯಕರ್ತರು ತಾಲೂಕು ಕಚೇರಿಗೆ ಮುಂದೆ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಗುರುವಾರ ಅಂತ್ಯಗೊಳಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಆದೇಶ್ ಮಾತನಾಡಿ, ಪ್ರತಿವರ್ಷ ತಾಲೂಕಿನಲ್ಲಿ ಸರಾಸರಿಯಂತೆ ಹೆಚ್ಚು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಕ್ಷೀಣಿಸಿದ್ದು, ತಾಲೂಕಿನಲ್ಲಿ ತೀವ್ರ ಬರ ಆವರಿಸಿದೆ. ಈ ಹಿನ್ನೆಲೆಯಲ್ಲಿ ಬೇಲೂರು ತಾಲೂಕನ್ನು ಬರ ಪಟ್ಟಿಗೆ ಸೇರಿಸುವಂತೆ ಎರಡು ದಿನದಿಂದ ಪ್ರತಿಭಟನಾ ಧರಣಿ ನಡೆಸುತಿದ್ದೆವು. ಈ ನಡುವೆ ಗುರುವಾರ ಬೇಲೂರು ತಾಲೂಕು ಬರಪೀಡತ ಪಟ್ಟಿಗೆ ಸೇರ್ಪಡೆಗೊಂಡಿರುವ ಮಾಹಿತಿ ಬಂದಿದ್ದು, ಹೋರಾಟವನ್ನು ನಿಲ್ಲಿಸಿದ್ದೇವೆ ಎಂದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಹರ್ಷವರ್ಧನ್, ತಾಲೂಕು ಉಪಾಧ್ಯಕ್ಷ ಸುನಿಲ್ ಬೆಳ್ಳೊಟ್ಟೆ, ಮುಖಂಡರಾದ ರಿಯಾಜ್, ದೇವರಾಜ್, ಮನು, ಸುಷ್ಮಾ, ಆಶಾ, ಉಷಾ, ಸಚಿನ್, ಸೋಮೇಗೌಡ, ಕುಮಾರ್, ಹಾಸನ್ ಸುನೀಲ್ ಇತರರಿದ್ದರು.