inculcate-good-manners-in-children
inculcate-good-manners-in-children ತುರುವೇಕೆರೆ: ಇಂದಿನ ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಕಡಿಮೆಯಾಗುತ್ತಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಸುರೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾರಣ್ಯ ಪ್ರೌಢಶಾಲೆಯ 2007ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೂ ಗುರುಗಳನ್ನು ಮಹತ್ವದ ಸ್ಥಾನದಲ್ಲಿ ಇಡಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ಗುರುಗಳಿಗೆ ಗುರುದಕ್ಷಣೆ ನೀಡಿ ಅತ್ಯಂತ ಪೂಜನೀಯ ಸ್ಥಾನದಲ್ಲಿ ಗೌರವವನ್ನು ನೀಡುತ್ತಿದ್ದರು. ಆದರೆ ಇತ್ತೀಚೆಗೆ ಗುರುಗಳಿಗೆ ಸಿಗುವ ಗೌರವ ಕಡಿಮೆಯಾಗುತ್ತಿದೆ ಎಂದರು.
ನಿವೃತ್ತ ಶಿಕ್ಷಕರಾದ ಜೆ.ಮಂಜಪ್ಪ, ಎಂ.ನಂಜುಂಡಪ್ಪ, ಟಿ.ಜೆ.ನಂಜುಂಡಯ್ಯ, ಟಿ.ಆರ್.ಜಯಣ್ಣ, ಎ.ಶಿವಮೂರ್ತಿ, ಜಿ.ಗೋಪಾಲ್, ಎಸ್.ಎಸ್.ಬೇಲೂರಪ್ಪ, ಬಿ.ಆರ್.ಬಸವರಾಜು, ಆರ್.ಬೋರಪ್ಪ ಪರಿಚಾರಕರಾದ ಗೋಪಾಲ್, ಕೃಷ್ಣಮೂರ್ತಿ ಸೇರಿ ಸಿಬ್ಬಂದಿಗಳನ್ನೂ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕರಾದ ಲಾಲಪ್ಪನಾಯ್ಕ, ಲಕ್ಷ್ಮೀಕಾಂತ್, ಪ್ರಕಾಶ್ ಬಂಡಾರಿ, ಎಲ್.ಸಿದ್ದಲಿಂಗಯ್ಯ ಸೇರಿ 2007ರ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರು ಇದ್ದರು.