ಸುರಪುರದ ಕಡ್ಲಪ್ಪನವರ ನಿಷ್ಠಿ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಶ್ರೀ ಪ್ರಭುಲಿಂಗ ಸ್ವಾಮೀಜಿ, ಡಾ.ಮಾನಸ, ಸುರೇಶ ಸಜ್ಜನ್​, ಪ್ರಕಾಶ ಅಂಗಡಿ ಇತರರಿದ್ದರು. 
ರಾಜ್ಯ

ಪುಸ್ತಕಗಳ ಅಧ್ಯಯನದಿಂದ ಜ್ಞಾನ ವೃದ್ಧಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪ್ರಭುಲಿಂಗ ಸ್ವಾಮೀಜಿ ನುಡಿ
  • ಕಡ್ಲಪ್ಪನವರ ನಿಷ್ಠಿ ಮಠದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ
ಸುರಪುರ: ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಸಂಸತಿ ಬೆಳಸಿಕೊಳ್ಳುವುದರ ಜತೆ ವಿದ್ಯಾರ್ಥಿಗಳು ಮತ್ತು ಯುವ ಜನರು ಸಹ ಪುಸ್ತಕಗಳ ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಶ್ರೀ ಪ್ರಭುಲಿಂಗ ಸ್ವಾಮೀಜಿ ಸಲಹೆ ನೀಡಿದರು.
ನಗರದ ಕಡ್ಲಪ್ಪನವರ ನಿಷ್ಠಿ ಮಠದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ ಸಹಯೋಗದಡಿ ಮಂಗಳವಾರ ಏರ್ಪಡಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಪುಸ್ತಕಗಳ ಮಹತ್ವ ಅಪಾರ. ಅವು ಜ್ಞಾನ, ಅನುಭವ ಮತ್ತು ಜೀವನದ ಮಾರ್ಗದರ್ಶಕಗಳಾಗಿವೆ ಎಂದರು.
ಗ್ರಂಥಾಲಯ ಉದ್ಘಾಟಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಅಡುಗೆ ಕೋಣೆ, ದೇವರ ಕೋಣೆಯಂತೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪುಸ್ತಕಗಳಿಗಾಗಿಯೇ ಒಂದು ಕೋಣೆ ಮೀಸಲಿರಿಸಬೇಕು. ಅಂದಾಗಲೇ ಪುಸ್ತಕ ಸಂಸತಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಸುರಪುರ ತಾಲೂಕಿನ 15 ಮನೆಗಳಲ್ಲಿ ಲೈಬ್ರರಿ ಮಾಡಲಾಗುತ್ತಿದೆ. ಶ್ರೀಮಠದಲ್ಲೂ ಗ್ರಂಥಾಲಯ ಆರಂಭಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಬರುವ ದಿನಗಳಲ್ಲಿ ಶಿಕ್ಷಕರು, ಜನಪ್ರತಿನಿಧಿಗಳು, ಪತ್ರಕರ್ತರು, ಗಣ್ಯರ ನಿವಾಸಗಳಲ್ಲೂ ಗ್ರಂಥಾಲಯ ಪ್ರಾರಂಭಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಕಲಬುರಗಿ&ಯಾದಗಿರಿ ಡಿಸಿಸಿ ಬ್ಯಾಂಕ್​ ನಿರ್ದೇಶಕ ಸುರೇಶ ಸಜ್ಜನ್​ ಮಾತನಾಡಿ, ಮಠದ ಪೂಜ್ಯರು ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಪ್ರಮುಖರಾದ ಶರಣಯ್ಯಸ್ವಾಮಿ ಮಠಪತಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪ ಮಠ, ಮಲ್ಲಿಕಾರ್ಜುನ ಜಾಲಹಳ್ಳಿ, ಶರಣಪ್ಪ ಹಳ್ಳದ, ಶಿವಶರಣಬಸವ ಪುರಾಣಿಕಮಠ, ಸಜ್ಜನಕುಮಾರ ಕಲ್ಯಾಣಶೆಟ್ಟಿ, ಶ್ರೀಶೈಲ ನಿಂಬಾಳ, ಎಸ್​.ರಾಠೋಡ್​, ವೆಂಕಟೇಶ ಪಾಟೀಲ್​, ಮಹಾಂತೇಶ ಗೋನಾಲ, ಜಾವೇದ್​ ಹುಸೇನ್​ ಹವಲ್ದಾರ್​, ಶ್ರೀಶೈಲ ಯಂಕಂಚಿ, ರಾವೇಂದ್ರ ಭಕ್ರಿ, ಮಹೇಶ ಹಳ್ಳದ, ಲಂಕೇಶ ದೇವತ್ಕಲ್​, ಭೀಮಣ್ಣ ದೊರೆ ಇತರರಿದ್ದರು. ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ ಕನಕಪ್ಪ ವಾಗಣಗೇರಾ ಪ್ರಾಸ್ತಾವಿಕ ಮಾತನಾಡಿದರು. ದೇವು ಹೆಬ್ಬಾಳ ನಿರೂಪಣೆ ಮಾಡಿ ವಂದಿಸಿದರು.