Increased use of Kannada in the border area
ಚಿಂತಾಮಣಿ: ರಾಜ್ಯದ ಗಡಿ ಪ್ರದೇಶದಲ್ಲೂ ಕನ್ನಡದ ವಾತಾವರಣ ಹೆಚ್ಚು ಕಾಣಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಬಟ್ಲಹಳ್ಳಿ ಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಕನ್ನಡಕ್ಕೆ ಒತ್ತು ನೀಡುತ್ತಿದ್ದಾರೆಂದು ತಾಲೂಕು ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ತಿಳಿಸಿದರು.
ತಾಲೂಕಿನ ಬಟ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಮಾನವ ಸಂಪನ್ಮೂಲ ಮತ್ತು ಸಾಂಸತಿಕ ಅಭಿವೃದ್ಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಡಿ ನಾಡಿನಲ್ಲಿ ಕನ್ನಡ ಮತ್ತು ಸಂಸತಿ ಅಭಿವೃದ್ಧಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಲ್ಲಿನ ಜನರು ತೆಲುಗು ಮೂಲಕ ಕನ್ನಡಕ್ಕೆ ಅಭಿಮಾನ ತೋರಿಸುತ್ತಿರುವುದದು ಈ ಭಾಗದ ವೈಶಿಷ್ಟ$್ಯತೆಯಾಗಿದೆ. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪ್ರಪಂಚದ ಅತ್ಯುತ್ತಮ 20 ಭಾಷೆಗಳಲ್ಲಿ ಒಂದಾಗಿದೆ. ಇತರ ಭಾಷೆಗಳ ಲಿಪಿಗಿಂತಲೂ ಕನ್ನಡ ಲಿಪಿಯು ಸುಂದರವಾಗಿದೆ.2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದು, ಇದರ ಘನತೆ ಮತ್ತಷ್ಟು ಹೆಚ್ಚಿದೆ ಎಂದರು.
ಚಿಂತಾಮಣಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಅಶ್ವತ್ಥ್ ಮಾತನಾಡಿ, ಕನ್ನಡಕ್ಕೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಇರಗಂಪಲ್ಲಿ ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟೇಶ್ವರ ರಾವ್ ಮಾತನಾಡಿ, ಈ ಭಾಗದ ಜನರು 20 ವರ್ಷಗಳ ಹಿಂದೆ ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದರು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ.ಬಹುತೇಕ ಮಂದಿ ಸ್ವಚ್ಛವಾಗಿ ಕನ್ನಡ ಮಾತನಾಡುತ್ತಾರೆ. ಈ ಗಡಿ ಪ್ರದೇಶವು ಕನ್ನಡ ಮಯವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕವಿ, ಅಂಕಣ ಬರಹಗಾರ ಮೂಡಲ ಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿ, ಗಡಿ ಪ್ರದೇಶಗಳಲ್ಲಿ ದ್ವಿಭಾಷೆಗಳು ಅಸ್ತಿತ್ವದಲ್ಲಿರುತ್ತವೆ. ಈ ಭಾಗವು ಆಂಧ್ರದ ಗಡಿಯಂಚಿನಲ್ಲಿ ಇರುವುದರಿಂದ ಇಲ್ಲಿ ತೆಲುಗಿನ ಪ್ರಭಾವವು ಹೆಚ್ಚಾಗಿದೆ ಎಂದರು.