ರಾಜ್ಯ

ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸ್ಕೌಟ್ಸ್​-ಗೈಡ್ಸ್​ನಿಂದ ಕಲಬುರಗಿ
ಕಲಬುರಗಿ: ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಟಕದ ಪುರಸ್ಕಾರ (ಪ್ರಶಸ್ತಿ) ಕಲಬುರಗಿಯ ಅಪ್ಪಾ ಪಬ್ಲಿಕ್​ ಶಾಲೆ (ಸಿಬಿಎಸ್​ಇ) ವಿದ್ಯಾರ್ಥಿನಿ ಅನುಷ್ಕಾ ವೈ.ಅಷ್ಟಗಿ ಸೇರಿ ಏಳು ವಿದ್ಯಾರ್ಥಿಗಳು ಪಡೆದಿದ್ದಾರೆ.
ಚಂದ್ರಕಾಂತ ಪಾಟೀಲ್​ ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧಿ ಎಸ್​.ಪಾಟೀಲ್​, ಅನಮೋಲ್​ ಎಂ.ಪುಜಾರಿ, ಯೋಗೇಶ್​, ಜೇವರ್ಗಿ ಕಾಲನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಂಜೇಶ್ವರಿ, ಅಫಜಲಪುರದ ವಿದ್ಯಾಶ್ರೀ, ಅಪ್ಪಾ ಪಬ್ಲಿಕ್​ ಶಾಲೆಯ ನಿಧಿ ತಿವಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆರೋಗ್ಯ ಸಚಿವರೂ ಆದ ಸಂಘಟನೆಯ ಅಪರ ಮುಖ್ಯ ಆಯುಕ್ತ ಯು.ಟಿ. ಖಾದರ್​ ಪ್ರಶಸ್ತಿ ಪ್ರದಾನ ಮಾಡಿದರು. ಸ್ಕೌಟ್ಸ್​ ಮತ್ತು ಗೈಡ್ಸ್​ ಕರ್ನಾಟಕ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್​. ಸಿಂಧ್ಯಾ ಇತರರಿದ್ದರು.
ಜಿಲ್ಲಾ ಆಯುಕ್ತ ಎಸ್​.ಪಿ. ಸುಳ್ಳದ, ಕಾರ್ಯದರ್ಶಿ ಪೀರಪ್ಪ ಹೂಗೊಂಡ, ಜಂಟಿ ಕಾರ್ಯದರ್ಶಿ ರಾಜಕುಮಾರ ಮರಾಠೆ ಮಾರ್ಗದರ್ಶನದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆಯುವ ಮೂಲಕ ಕೀರ್ತಿ ಹೆಚ್ಚಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ ದಾಕ್ಷಾಯಿಣಿ ಎಸ್​.ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸ್ಥಾನದ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ ಹಾಗೂ ಅಪ್ಪಾ ಪಬ್ಲಿಕ್​ ಶಾಲೆ ಪ್ರಾಂಶುಪಾಲ ಶಂಕರಗೌಡ ಹೊಸಮನಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
"

ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಕರ್ನಾಟಕ ಕೊಡಮಾಡುವ ರಾಜ್ಯ ಪುರಸ್ಕಾರಕ್ಕೆ ಅಪ್ಪಾ ಪಬ್ಲಿಕ್​ ಶಾಲೆ ವಿದ್ಯಾರ್ಥಿನಿಯರಾದ ಅನುಷ್ಕಾ ವೈ.ಅಷ್ಟಗಿ, ನಿಧಿ ತಿವಾರಿ ಭಾಜನರಾಗುವ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.

— > ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ರಾಜ್ಯ ಉಪಾಧ್ಯರು, ಸ್ಕೌಟ್ಸ್​-ಗೈಡ್ಸ್​