ತೊಂಡೆಬಾವಿ ಹೋಬಳಿಯ ಅಲ್ಲಿಪುರದ ಸರ್ಕಾರಿ ಪ್ರೌಢಶಾಲೆ ಕೊಠಡಿಗಳನ್ನು ಹೊಸೆಟ್​ ಸಂಸ್ಥೆಯ ವೀರಣ್ಣಗೌಡ ಮತ್ತು ಮಂಜುನಾಥ್​ ಉದ್ಘಾಟಿಸಿದರು. ಮುಖ್ಯಶಿಕ್ಷಕ ಶ್ರೀನಿವಾಸ್​, ಅಂಜುಮನ್​ ಸಂಘದ ಅಧ್ಯಕ್ಷ ಅಂಜುಮನ್​ ಇ ಜಪಾರ್ಯ, ನವೀನ್​ ಕುಮಾರ್​ ಇತರರು ಇದ್ದರು. 
ರಾಜ್ಯ

ಅಲ್ಲಿಪುರ ಸರ್ಕಾರಿ ಶಾಲೆ ಕಟ್ಟಡ ಉದ್ಘಾಟನೆ

ತೊಂಡೆಬಾವಿ :

ಹೋಬಳಿಯ ಅಲ್ಲಿಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಉತ್ತಮ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಕೊಠಡಿಗಳ ನಿಮಾರ್ಣ ಮಾಡಲಾಗಿದೆ ಎಂದು ಮುಖ್ಯಶಿಕ್ಷಕ ಶ್ರೀನಿವಾಸ್​ ತಿಳಿಸಿದರು.

ಅಲ್ಲಿಪುರ ಸರ್ಕಾರಿ ಪ್ರೌಢಶಾಲೆ ಹೊಸೆಟ್​ ಸಂಸ್ಥೆಯ ನೆರವಿನೊಂದಿಗೆ 60 ಲಕ್ಷ ಅನುದಾನದಲ್ಲಿ ನಿಮಾರ್ಣವಾದ 4 ಶಾಲಾ ಕಟ್ಟಡಗಳನ್ನು ಹೊಸೆಟ್​ ಸಂಸ್ಥೆಯವರಾದ ವೀರಣ್ಣಗೌಡ ಮತ್ತು ಮಂಜುನಾಥ್​ ಉದ್ಘಾಟಿಸಿ ಮಾತನಾಡಿ, ಸ್ಮಾರ್ಟ್​ ಕ್ಲಾಸ್​, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹೀಗೆ ಸೌಕರ್ಯ ಸರಿಯಾದ ರೀತಿಯಲ್ಲಿ ಇದ್ದಾಗ ಮಕ್ಕಳಿಗೆ ಶಿಕ್ಷಣಕ್ಕೆ ಅನೂಕೂಲವಾತ್ತದೆ ಎಂದರು.
ಅಂಜುಮನ್​ ಸಂಘದ ಅಧ್ಯಕ್ಷ ಅಂಜುಮನ್​ ಇ ಜಪಾರ್ಯ ಮಾತನಾಡಿ, ಶಾಲಾ ಕಟ್ಟಡಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನವೀನ್​ ಕುಮಾರ್​ ಮಾತನಾಡಿ, ಕುಮಾರಿ ರಿಯಾಜ್ಡ್​ ಯುಎಸ್​ಎ ಹೊಸಟ್​ ಸಂಸ್ಥೆಯ ಸಂಸ್ಥಾಪಕರ ನೆರವಿನೊಂದಿಗೆ ನಿಮಾರ್ಣವಾದ ಕಟ್ಟಡವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಂಘದ ಕಾರ್ಯದರ್ಶಿ ನೀರ್​ ಶಹಬಾದ್​ ಹುಸೇನ್​, ಮುಖ್ಯಶಿಕ್ಷಕ ಶ್ರೀನಿವಾಸ್​, ಎಚ್​ಡಿಎಂಸಿ ಅಧ್ಯಕ್ಷ ನಟರಾಜ್​, ನವೀನ್​ ಕುಮಾರ್​ ಇತರರು ಇದ್ದರು.