ಚಿಂತಾಮಣಿ ಸರ್ಕಾರಿ ಕಾಲೇಜಿನಲ್ಲಿ ರೋವರ್ ಹಾಗೂ ರೇಂರ್ಜಸ್ ಘಟಕವನ್ನು ಪ್ರಾಂಶುಪಾಲೆ ಪ್ರೊ.ಕುಸುಮ ಮಂಗಳಾ ಉದ್ಘಾಟಿಸಿದರು. ಎಎಲ್ಟಿ ಸ್ಕೌಟ್ ಮಾಸ್ಟರ್ ಬಿ.ಎನ್.ವಿನಯ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಂಟಿ ನಿರ್ದೇಶಕಿ ಎಲ್ಟಿ ಗೈಡ್ ಎನ್.ಉಮಾದೇವಿ ಇತರರು ಇದ್ದರು.
ಚಿಂತಾಮಣಿ :ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ನೂತನ ರೋವರ್ ಹಾಗೂ ರೇಂರ್ಜಸ್ ಘಟಕಗಳ ಉದ್ಘಾಟಿಸಲಾಯಿತು.
ಕಾಲೇಜು ಪ್ರಾಂಶುಪಾಲೆ ಪ್ರೊ.ಡಿ.ವಿ.ಕುಸುಮಮಂಗಳಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ, ಸೇವಾ ಮನೋಭಾವ ಬೆಳೆಸಿಕೊಳ್ಳಲು ಸ್ಕೌಟಿಂಗ್ ಮತ್ತು ಗೈಡಿಂಗ್ ಮಹತ್ವದ ಪಾತ್ರವಹಿಸುತ್ತದೆ ಎಂದರು.
ಕರ್ನಾಟಕದ ಎಎಲ್ಟಿ ಸ್ಕೌಟ್ ಮಾಸ್ಟರ್ ಬಿ.ಎನ್.ವಿನಯ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಂಟಿ ನಿರ್ದೇಶಕಿ ಎಲ್ಟಿ ಗೈಡ್ ಎನ್.ಉಮಾದೇವಿ, ಮೂಲ ಸ್ಕೌಟಿಂಗ್ ಮತ್ತು ಗೈಡಿಂಗ್ ತತ್ವಗಳು, ಶಿಸ್ತು ಹಾಗೂ ಸಮಾಜ ಸೇವೆಯ ಅಂಶಗಳ ಕುರಿತು ಮಾಹಿತಿ ನೀಡಿದರು.
ರೇಂಜರ್ ಗೈಡ್ ಲೀಡರ್ ಎಸ್.ಪ್ರಮೀಳಾ, ರೋವರ್ ಸ್ಕೌಟ್ ಲೀಡರ್ ನವೀನ್, ಉಪನ್ಯಾಸಕಿ ಡಾ.ಮಂಜುಳಾ, ಇತಿಹಾಸ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಪಾಷಾ, ಸಹಾಯಕ ಪ್ರಾಧ್ಯಾಪಕ ಮುನೇಗೌಡ ಇದ್ದರು.