ಮೂಡಲಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ.ಅಂಬೇಡ್ಕರ್​ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಶ್ರೀಶೈಲ ಗುಡಮೆ, ಚೇತನ ಜೋಗನ್ನವರ, ಪ್ರಸನ್ನ ನೇರ್ಲೆಕರ ಇತರರಿದ್ದರು. 
ರಾಜ್ಯ

ಒಗ್ಗಟ್ಟಿನಲ್ಲಿ ಅಡಗಿದೆ ಸಮಾಜದ ಅಭಿವೃದ್ಧಿ

ವಿಜಯವಾಣಿ ಸುದ್ದಿಜಾಲ ಮೂಡಲಗಿ
ಸಮಾನತೆ ಮತ್ತು ನ್ಯಾಯ ಸ್ಥಾಪನೆಗೆ ಹೋರಾಡಿದ ಮಹಾನಾಯಕ ಡಾ.ಅಂಬೇಡ್ಕರ್​ ಎಂದು ನಾಗನೂರ ಅಥರ್ವ ಪಿಯು ಕಾಲೇಜು ನಿರ್ದೇಶಕ ಚೇತನ ಜೋಗನ್ನವರ ಹೇಳಿದರು.
ಪಟ್ಟಣದ ಶ್ರೀಪಾದಬೋಧ ಸ್ವಾಮಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಶಕ್ತಿ ಒಗ್ಗಟ್ಟಿನಲ್ಲಿ ಇದೆ ಎಂದು ಸಾರಿದ ಅಂಬೇಡ್ಕರ್​ ಏಕತೆ ಬೆಳೆಸಿ, ಎಲ್ಲ ವರ್ಗಗಳ ಜನರು ಒಂದಾಗಿ ಕೆಲಸ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದರು.
ತಹಸೀಲ್ದಾರ್​ ಶ್ರೀಶೈಲ ಗುಡಮೆ ಮಾತನಾಡಿದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಪಂ ಇಒ ಪ್ರಸನ್ನ ನೇರ್ಲೆಕರ, ಬಿಇಒ ಪ್ರಕಾಶ ಹಿರೇಮಠ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ.ಎಸ್​.ನಾಗನ್ನವರ, ಸಿಪಿಐ ಶ್ರೀಶೈಲ ಬ್ಯಾಕೂಡ, ಪ್ರಾಚಾರ್ಯ ಮಹೇಶ ಕುಂಬಾರ ಇತರರಿದ್ದರು. ಗೋಕಾಕ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಎಂ.ಎಸ್​.ಪಾಟೀಲ ಸ್ವಾಗತಿಸಿದರು. ಮೂಡಲಗಿ ವಸತಿ ನಿಲಯಪಾಲಕ ಯಲ್ಲಪ್ಪ ಭಜಂತ್ರಿ ನಿರೂಪಿಸಿದರು. ವಡೇರಹಟ್ಟಿ ವಸತಿನಿಲಯ ಪಾಲಕ ಅರುಣ ನುಚ್ಚುಂಡಿ ವಂದಿಸಿದರು.