ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ರಟ್ಟಮತ ಸಂಕುಲ ಉದ್ಘಾಟನೆ, ರಾಯಣ್ಣ ಸ್ಮರಣೋತ್ಸವ ಹಾಗೂ ಹಾಲುಮತ ಸಮುದಾಯದ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ವಿರೂಪಾ ಮಾಮನಿ, ರಾಹುಲ ಸಂಗ್ರೇಶಿ, ಸದಾಶಿವ ಕೌಜಲಗಿ, ಜಿ.ಬಿ.ಕಣವಿ, ಮಡಿವಾಳಪ್ಪ ಬಿದರಗಡ್ಡಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೆಸರಲ್ಲಿ ಕುರುಬ ಸಮುದಾಯಕ್ಕೆ ಮಂಜೂರಾಗಿರುವ ಐದು ಎಕರೆ ಜಮೀನಿನಲ್ಲಿ 2 ಕೋಟಿ ರೂ. ಅನುದಾನದಲ್ಲಿ ಮುಂಬರುವ 5 ತಿಂಗಳಿನಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ನಗರದ ನಿಕ್ಕಂ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲುಮತ ಸಾಂಸತಿಕ ಬಳಗ ಭಾನುವಾರ ಹಮ್ಮಿಕೊಂಡಿದ್ದ ರಟ್ಟಮತ ಸಂಕುಲ ಉದ್ಘಾಟನೆ, ರಾಯಣ್ಣ ಸ್ಮರಣೋತ್ಸವ ಹಾಗೂ ಹಾಲುಮತ ಸಮುದಾಯದ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಾಲುಮತ ಸಮುದಾಯ ಶೈಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಸಮುದಾಯದ ಸಂಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ಧಿಗೆ ಬಲ ಸಿಗಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶಪ್ರೇಮ, ತ್ಯಾಗ ಹಾಗೂ ಹೋರಾಟದ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು. ಹಾಲುಮತ ಸಮುದಾಯದ ಶೈಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಗೇನಣ್ಣವರ ಉಪನ್ಯಾಸ ನೀಡಿದರು. ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಎಂ.ಎಸ್.ಹಿರೇಕುಂಬಿ, ಸಿದ್ದಪ್ಪ ಗೊರವನಕೊಳ್ಳ, ಪಂಚಪ್ಪ ಮಲ್ಲಾಡ, ಶ್ರೀಧರ ಬೆಳವಡಿ ಇತರರಿದ್ದರು.
ಕುರುಬ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಐದು ಎಕರೆ ಜಮೀನು ಮಂಜೂರಾಗಿದೆ. ಕನಕ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಲಭ್ಯವಿದೆ. ಭವನ ನಿರ್ಮಾಣದಿಂದ ಸಭೆ, ಸಾಂಸತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.