ಬೈಲಹೊಂಗಲ ಸಮೀಪದ ನಯಾನಗರ ಗ್ರಾಮದ ಹತ್ತಿರದ ಮಲಪ್ರಭಾ ನದಿ ದಡದಲ್ಲಿ ಸಾವಿರಾರು ಜನರು ತೆರಳಿ ಸಂಕ್ರಮಣ ಆಚರಿಸಿದರು.
ಬೈಲಹೊಂಗಲ: ಶಿವ ಪಾರ್ವತಿಯರ ತಾಣ, ದಣ ಕಾಶಿಯಂದೇ ಪ್ರಸಿದ್ದಿ ಪಡೆದ ಶ್ರೀೇತ್ರ ಸೊಗಲದಲ್ಲಿ ಸಂಕ್ರಾಂತಿಯನ್ನು ಬುಧವಾರ, ಗುರುವಾರ ಸಹಸ್ರಾರು ಭಕ್ತರು ಸಂಭ್ರದಿಂದ ಆಚರಿಸಿದರು. ಪುಣ್ಯಸ್ನಾನಗೆದು ಸೋಮೇಶ್ವರ, ಪಾರ್ವತಿದೇವಿ ಹಾಗೂ ೇತ್ರದ ಹಲವಾರು ದೇವರಿಗೆ ನಮಿಸಿದರು.
ಸಂಕ್ರಾತಿ ಅಂಗವಾಗಿ ಬಾಳೆ ದಿಂಡಿನ ತೆಪ್ಪದ ರಥವನ್ನು ಕಬ್ಬು, ತೆಂಗು, ಹೂವುಗಳಿಂದ ಅಲಂಕರಿಸಲಾಗಿತ್ತು. ಸೋಮೇಶ್ವರ ದೇವಸ್ಥಾನದಲ್ಲಿದ್ದ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ತೆಪ್ಪದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಹೊಸೂರ ಗುರುಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಹೊಸೂರ&ಬೆಲಹೊಂಗಲ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ತೆಪ್ಪದ ರಥೋತ್ಸವಕ್ಕೆ ಚಾಲನೆ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ, ಉಗರಗೋಳದ ಮಹಾಂತ ಸ್ವಾಮೀಜಿ, ಟ್ರಸ್ಟ್ ಅಧ್ಯ ವೀರನಗೌಡ ಸಂಗನಗೌಡರ, ಆಡಳಿತ ಮಂಡಳಿ ಸರ್ವ ಸದಸ್ಯರು, ಅರ್ಚಕರು, ಸುತ್ತಲಿನ ಗ್ರಾಮಗಳ ಪ್ರಮುಖರು ಪಾಲ್ಗೊಂಡಿದ್ದರು.
ೇತ್ರದ ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆ ಜರುಗಿತು. ಸೋಮೇಶ್ವರ, ಶಿವ&ಪಾರ್ವತಿ ಗದ್ದುಗೆ ಸಿಂಗರಿಸಲಾಗಿತ್ತು. ಬಿಲ್ವಾರ್ಚನೆ, ತ್ರಿಕಾಲ ಪೂಜೆ, ಬುತ್ತಿ, ಎಲೆ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ಅಲಂಕಾರ, ಸಹಸ್ರ ಬಿಲ್ವಾರ್ಚಣೆ, ಅಭಿಷೇಕ ಜರುಗಿದವು. ಸೇವಾ ಸಮಿತಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸಿದರು.