ಶಶೀಲ್​ ಜಿ. ನಮೋಶಿ 
ರಾಜ್ಯ

ನವೀನತೆ, ತಂತ್ರಜ್ಞಾನ ವಿಭಾಗದಲ್ಲಿ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆ ಅಧ್ಯಕ್ಷ ಶಶೀಲ್​ ನಮೋಶಿ ಬಣ್ಣನೆ
  • 30 ಯೋಜನೆಗಳಿಗೆ ಅನುದಾನ ಮಂಜೂರು
ಕಲಬುರಗಿ: ಹೈದರಾಬಾದ್​ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಒಟ್ಟು 30 ನವೀನ ಯೋಜನೆಗಳು ರಾಜ್ಯ ಸರ್ಕಾರದ ನವೀನತೆ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕ್ರಮದಡಿ ಆಯ್ಕೆಯಾಗಿವೆ. ಪ್ರತಿ ಕಾಲೇಜಿನ ತಲಾ 10 ವಿದ್ಯಾರ್ಥಿ ಯೋಜನೆಗಳಿಗೆ ಅನುದಾನ ಮಂಜೂರಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ವಿಧಾನ ಪರಿಷತ್​ ಸದಸ್ಯ ಶಶೀಲ್​ ಜಿ. ನಮೋಶಿ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯ ಕಾಲೇಜುಗಳಾದ ಪಿಡಿಎ ಇಂಜಿನಿಯರಿಂಗ್​ ಕಾಲೇಜು, ವಿ.ಜಿ.ಮಹಿಳಾ ಪದವಿ ಕಾಲೇಜು, ರಾಯಚೂರಿನ ಸರ್​ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್​ ಕಾಲೇಜುಗಳ ವಿದ್ಯಾರ್ಥಿಗಳು ನವೀನ ಸಂಶೋಧನೆ ಮತ್ತು ಉದ್ಯಮಶೀಲತೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಪಿಡಿಎ ಇಂಜಿನಿಯರಿಂಗ್​ ಕಾಲೇಜಿಗೆ 41.50 ಲಕ್ಷ ರೂ. ಹಾಗೂ ವಿ.ಜಿ.ಮಹಿಳಾ ಪದವಿ ಕಾಲೇಜಿಗೆ 42.50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆಗೆ ದೊರೆತ ಮಹತ್ವದ ಗೌರವ ಎಂದು ಹೇಳಿದ್ದಾರೆ.
ಪಿಡಿಎ ಕಾಲೇಜಿನ ಪ್ರಾಚಾರ್ಯ ಡಾ.ಎಸ್​.ಆರ್​.ಪಾಟೀಲ್​, ಡಾ.ನಾಗೇಂದ್ರ ಎಚ್​., ಡಾ. ನಾಗೇಶ ಸಾಲಿಮಠ ಹಾಗೂ ಪ್ರೊ.ಸಿದ್ದರಾಮ ಸಂಗೋಳಗಿ, ವಿ.ಜಿ.ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಆರ್​.ಬಿ.ಕೊಂಡಾ, ಡಾ.ರವೀಂದ್ರ ಹಾಗೂ ಡಾ.ಶಿವರಾಜ ಗೌನಳ್ಳಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ನೀಡಿ ಯೋಜನೆಗಳ ಆಯ್ಕೆಗೆ ಶ್ರಮಿಸಿದ್ದು, ಇವರು ಅಭಿನಂದನಾರ್ಹರು ಎಂದಿದ್ದಾರೆ.
ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಪಾಟೀಲ್​, ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಸ್ಥೆ ಆಡಳಿತಾಧಿಕಾರಿ ಡಾ.ಎಸ್​.ಎಲ್​.ಹಿರೇಮಠ್​ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.