ಮುನವಳ್ಳಿ ಶ್ರೀ ಸೋಮಶೇಖರಮಠದ ಲಿಂ.ಬಸವಲಿಂಗ ಶ್ರೀಗಳ ಪುಣ್ಯಸ್ಮರಣೋತ್ಸವವನ್ನು ಡಾ.ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮುರುಂದ್ರ ಶ್ರೀ, ಮುಕ್ತಾನಂದ ಶ್ರೀ, ಚೆನ್ನಮಲ್ಲ ಶಿವಾಚಾರ್ಯರು, ಪಂಚನಗೌಡ ದ್ಯಾಮನಗೌಡರ ಇತರರಿದ್ದರು. 
ರಾಜ್ಯ

ದೇಶದಲ್ಲಿಂದು ಶ್ರದ್ಧೆ, ಧರ್ಮ ಜೀವಂತ

ಮುನವಳ್ಳಿ: ದೇಶದಲ್ಲಿಂದು ಶ್ರದ್ಧೆ, ಧರ್ಮ ಜೀವಂತವಾಗಿದೆ ಎಂದರೆ ಸಾಧು, ಸಂತರು, ಮಹಾತ್ಮರು, ಯೋಗಿಗಳು, ಶರಣರು ನೀಡಿರುವ ಮೌಲ್ಯಾಧಾರಿತ ಉಪದೇಶಾಮೃತದಿಂದ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸೋಮಶೇಖರಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂ.ಬಸವಲಿಂಗ ಶ್ರೀಗಳ 70ನೇ ಪುಣ್ಯಸ್ಮರಣೆ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಳಿಕಟ್ಟಿ ತೋಂಟದಾರ್ಯಮಠದ ಶಿವಮೂರ್ತಿ ಶ್ರೀ, ಶಿಂದೋಗಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಶ್ರೀ, ತೊರಗಲ್ಲ ಗಚ್ಚಿನಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮತ್ತು ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿದರು.
ಸೋಮಶೇಖರಮಠದ ಮುರುಂದ್ರ ಶ್ರೀ ಅಧ್ಯಕ್ಷತೆ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸವದತ್ತಿ ರಾಜಾರಾಮಮಠದ ಗಂಗಾಧರ ದೀತ ಸಾನ್ನಿಧ್ಯ ವಹಿಸಿದ್ದರು. ರಮೇಶ ಗೋಮಾಡಿ, ಅರುಣಗೌಡ ಪಾಟೀಲ,
ಪುರಸಭೆ ಸದಸ್ಯ ಸುಭಾಷ ಗೀದಿಗೌಡ್ರ, ಗಂಗಾಧರ ಗೊರಾಬಾಳ, ಮಂಜುನಾಥ ಭಂಡಾರಿ, ಬಿ.ಬಿ.ಹುಲಿಗೊಪ್ಪ, ಶೇಖರ ಮುಪ್ಪಿನವರಮಠ, ದಾನು ಗದಗಿನ ಇತರರಿದ್ದರು.