ಕಲಹಾಳದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಾಮಕರಣ ಕಾರ್ಯಕ್ರಮದಲ್ಲಿ ಕಲ್ಲಪ್ಪ ಜಗ್ಗಲ, ಸಿದ್ದಪ್ಪ ದಾಡಿಭಾವಿ ಇತರರಿದ್ದರು.
ಸುರೇಬಾನ: ಸಮೀಪದ ಕಲಹಾಳ ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರ ದೇವಸ್ಥಾನದ ಬಳಿ ರಾಮದುರ್ಗ, ಕಲಹಾಳ, ಕೊಣ್ಣೂರ ಹಾಗೂ ಚಿಕ್ಕೊಪ್ಪ ಎಸ್.ಕೆ. ಗ್ರಾಮ ಸಂಪರ್ಕಿಸುವ ವೃತ್ತಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಲಾಯಿತು. ಬಳಿಕ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತುಮಕೂರಿನ ನೀಲಗಂಗಾ ಪ್ಯಾರಾ ಮೆಡಿಕಲ್ ಕಾಲೇಜ್ ಕಾರ್ಯದರ್ಶಿ ಕಲ್ಲಪ್ಪ ಜಗ್ಗಲ, ಮಲ್ಲಪ್ಪ ಹೂಗಾರ, ಹನುಮಂತಗೌಡ ಪಾಟೀಲ, ಶಂಕರಗೌಡ ಪಾಟೀಲ, ಬಸವರಾಜ ಗುಡ್ಡದ, ಗದಿಗೆಪ್ಪ ಗುಡ್ಡದ, ಮಲ್ಲಪ್ಪ ಹಾದಿಮನಿ, ಹನುಮಂತ ಮಾದರ, ಶಿವಪ್ಪ ಕಂಬಳಿ, ನಾಗಪ್ಪ ಕಪಲಿ, ಶರಣಪ್ಪ ಮಾದರ, ಈರಣ್ಣ ತಳವಾರ, ಹನುಮಂತ ಪೂಜಾರ, ಶಿವಪ್ಪ ಉಳ್ಳಾಗಡ್ಡಿ, ಲಕ್ಷ$್ಮಣ ಹಾಗನೂರ, ಹನುಮಂತ ಮಡಿವಾಳರ ಇತರರಿದ್ದರು.