ಬೂದಿಹಾಳದಲ್ಲಿ ಶ್ರೀ ಕಲ್ಮೇಶ್ವರ ಹಾಗೂ ಮಲಪ್ರಭಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. 
ರಾಜ್ಯ

ಬೂದಿಹಾಳದಲ್ಲಿ ಸಂಭ್ರಮದ ಕಲ್ಮೇಶ್ವರ ರಥೋತ್ಸವ

ಮಲ್ಲಮ್ಮನ ಬೆಳವಡಿ: ಸಮೀಪದ ಐತಿಹಾಸಿಕ ಹಿನ್ನೆಲೆಯ ಮಲಪ್ರಭಾ ನದಿ ತಟದಲ್ಲಿರುವ ಬೂದಿಹಾಳ ಗ್ರಾಮದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಶ್ರೀ ಕಲ್ಮೇಶ್ವರ ಹಾಗೂ ಮಲಪ್ರಭಾ ಮಹಾರಥೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಶ್ರೀ ಕಲ್ಮೇಶ್ವರ ದೇವರಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರು ಬಸವಲಿಂಗ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಮಂಗಲೆಯರ ಆರತಿ, ಡೊಳ್ಳಿನ ಮೇಳ ಹಾಗೂ ಕೋಲಾಟ ಮೇಳ ಸೇರಿ ವಿವಿಧ ವಾದ್ಯಗಳು ರಥೋತ್ಸವಕ್ಕೆ ಮೆರುಗು ತಂದವು.
ಬಳಿಕ ಶ್ರೀಗಳು ವಿರಾಜಮಾನರಾದ ತೆರೆದ ವಾಹನ ಹಾಗೂ ರಥೋತ್ಸವ ಮಲಪ್ರಭಾ ನದಿ ತೀರದವರೆಗೆ ಸಾಗಿತು. ರಾಚಯ್ಯ ಕುಲಕರ್ಣಿ, ಚನ್ನಬಸಯ್ಯ ಮಠದ, ರಾಜಶೇಖರಯ್ಯ ಮಠದ, ಜನಕರಾಜ ಪಾಟೀಲ, ಶಿವಾನಂದ ಕುಲಕರ್ಣಿ, ಸುರೇಶ ಸೂರ್ಯವಂಶಿ, ಮಂಜುನಾಥ ಅಳಗೋಡಿ, ರಾಜಶೇಖರ ದೊಡವಾಡ, ಮಹೇಶ ಕಾರಿಮನಿ, ವಿನಾಯಕ ಬಡಿಗೇರ, ಮಹಾಂತೇಶ ಹುಣಸಿಕಟ್ಟಿ, ದುಂಡೇಶ ಗರಗದ, ಬಸವರಾಜ ವಾರಿ, ದೇವೇಂದ್ರ ಜೋಗಿಗುಡ್ಡ ಇತರರಿದ್ದರು.
ಟಗರಿನ ಕಾಳಗ ಇಂದು: ಜ.16ರಂದು ಸಂಜೆ 7ಗಂಟೆಗೆ ಟಗರಿನ ಕಾಳಗ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಶಕಗಳ ಇತಿಹಾಸ ಹೊಂದಿರುವ ಬೂದಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನ ಅಪಾರ ಭಕ್ತರನ್ನು ಹೊಂದಿದೆ. ತಾಯಿ ಮಲಪ್ರಭೆ ಅನುಗ್ರಹದಿಂದ ಸ್ಥಳಿಯ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರ ಬಾಳು ಹಸನಾಗಿದೆ.
> ಗುರು ಬಸವಲಿಂಗ ಸ್ವಾಮೀಜಿ
ಜಗದ್ಗುರು ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠ