ಬೈಲಹೊಂಗಲದ ಸಂತ ್ರಾನ್ಸಿಸ್ ಕ್ಷೇವಿಯರ್ ಧರ್ಮಕೇಂದ್ರದ ವಾರ್ಷಿಕ ಮಹೋತ್ಸವ ಜರುಗಿತು. ಲೂಕಾಸ್ ಶಾಂತಪ್ಪ, ಾದರ್ ಎಝೆಕಿಯೇಲ್ ರಾಕೇಶ್ ಡಿಸೋಜಾ ಇತರರಿದ್ದರು.
ಬೈಲಹೊಂಗಲ: ಪ್ರತಿಯೊಬ್ಬ ಕೆಸ್ತನೂ ಜೀವನದಲ್ಲಿ ಯೇಸುಕ್ರಿಸ್ತರಿಗೆ ಸಾಯಾಗಿ ಬದುಕುವ ಸದ್ಗುಣ ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಗುರುಗಳಾದ ಲೂಕಾಸ್ ಶಾಂತಪ್ಪ ಹೇಳಿದರು.
ನಗರದ ಎಂ.ಜಿ.ಹೌಸಿಂಗ್ ಕಾಲನಿಯ ಸಂತ ್ರಾನ್ಸಿಸ್ ಕ್ಷೇವಿಯರ್ ಧರ್ಮ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಕೇಂದ್ರದ ಗುರುಗಳಾದ ವಂದನೀಯ ಾದರ್ ಎಝೆಕಿಯೇಲ್ ರಾಕೇಶ್ ಡಿಸೋಜಾ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವ ನೆರವೇರಿತು. 45ಕ್ಕೂ ಅಧಿಕ ಧರ್ಮ ಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತರು ದೇವರ ಕೃಪೆಗೆ ಪಾತ್ರರಾದರು. ಧರ್ಮಕೇಂದ್ರ ಹೂವಿನ ಕಲಾತ್ಮಕ ಅಲಂಕಾರ ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಕಂಗೊಳಿಸಿತು.
ಬ್ರದರ್ ಜಾಯ್ಸನ್ ಕೊರೇಯಾ, ಮೌಂಟ್ ಕಾರ್ಮೆಲ್ ಕಾನ್ವೆಂಟಿನ್, ಡಾ.ವಿನಯ ಮೋಹನ, ರಾಜು ಆಚಾರಿ, ರ್ಬನಾಡ್ ಅಬ್ರಾಹಂ, ಸೆಲಿನಮ್ಮ ಹಂಚಿನಮನಿ, ಎಝೆಕೀಯಲ್ ಹಂಚಿನಮನಿ, ರಮೇಶ ಅದೋನಿ, ಮಂಗಲಾ ಮಾಳಗಿ, ನೀಲವ್ವ ಬುರ್ಲಿ, ಇಂದಿರಾ ಅಪ್ಪಯ್ಯನವರ, ಪುರಸಭೆ ಸದಸ್ಯೆ ಅಂಬಿಕಾ ಕೋಟಬಾಗಿ, ರಮೇಶ ದಳವಾಯಿ, ಉಳವಪ್ಪ ಕಡಕೋಳ, ವಿದ್ಯಾದಿಪ ಸಮಾಜ ಸೇವಾ ಸಂಸ್ಥೆ ಸಂಯೋಜಕ ಕೀರಪ್ಪ ಹಳಮನಿ, ಜೋಸ್ೆ ತಳವಾರ ಇತರರಿದ್ದರು.