ಗೋಕಾಕ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಕಲಾವಿದರನ್ನು ಸನ್ಮಾನಿಸಿದರು. ಪರಶುರಾಮ ಗಸ್ತೆ, ಅಶೋಕ ಮಲಬನ್ನವರ, ಡಿ.ಎಸ್.ಕೂಡವಕ್ಕಲಿಗ, ಎಲ್.ಕೆ.ತೊರಣಗಟ್ಟಿ ಇತರರಿದ್ದರು.
ಗೋಕಾಕ: 12ನೇ ಶತಮಾನದ ವಚನಕಾರರು ಹೇಳಿಕೊಟ್ಟ ಕಾಯಕ, ದಾಸೋಹ ಮತ್ತು ಸಮಾನತೆ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ ಆರ್.ಎಲ್.ಮಿರ್ಜಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ (ವಚನಕಾರರ) ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ನಾವೆಲ್ಲರೂ ಕಾಯಕದೋಳಗೆ ಕೈಲಾಸ ಕಾಣಬೇಕು. ಮಕ್ಕಳಿಗೆ ಶರಣರ ಬದುಕಿನ ಪರಿಚಯ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಸಮಾಜ ನಾವು ಯಾವ ಸಮುದಾಯದಲ್ಲಿ ಹುಟ್ಟಿದ್ದೇವೆ ಎಂಬುದನ್ನು ನೋಡುವುದಿಲ್ಲ. ಬದಲಿಗೆ ಯಾವ ಸತ್ಕಾರ್ಯ ಮಾಡಿದ್ದೇವೆ ಎಂಬುದನ್ನು ಗಮನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಹಾಗೂ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಮಲಬನ್ನವರ, ಸಿಡಿಪಿಒ ಡಿ.ಎಸ್.ಕೂಡವಕ್ಕಲಿಗ, ಎಲ್.ಕೆ.ತೊರಣಗಟ್ಟಿ, ಕೆ.ಎಸ್.ಆರ್.ಟಿ.ಸಿಯ ಅಮರ ಲಂಗೋಟಿ, ಮುಖಂಡರಾದ ಗೋವಿಂದ ಕಳ್ಳಿಮನಿ, ವೀರಭದ್ರ ಮೇಲನ್ನವರ,
ಅಜಿತ ಹರಿಜನ, ಓಂಕಾರಪ್ಪ ಬಂಡಿವಡ್ಡರ, ಸುಂದ್ರವ್ವ ಕಟ್ಟಿಮನಿ, ರುಕಮವ್ವ ಕುದರಿ, ಭರಮಣ್ಣ ಗಾಡಿವಡ್ಡರ, ಗೀತಾ ಸಣ್ಣಕ್ಕಿ ಇತರರಿದ್ದರು.