ಹೊಳೆನರಸೀಪುರ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೀಂದ್ರಶೆಟ್ಟಿ ಉದ್ಘಾಟಿಸಿದರು. ಐಶ್ವರ್ಯಾ ಗುಡದಿನ್ನಿ, ಶಿವಕುಮಾರ್, ಶಿವಣ್ಣ, ಸುನೀಲ್, ಶಿವಮ್ಮ, ಶಿರಿನ್ ಇದ್ದರು. 
ರಾಜ್ಯ

ಚರಿತ್ರೆಯಲ್ಲಿ ಕೆಂಪೇಗೌಡರ ಹೆಸರು ಅಜರಾಮರ

ಪ್ರಮುಖ ಮುಖ್ಯಾಂಶಗಳು

  • ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೀಂದ್ರಶೆಟ್ಟಿ
  • ಪಟ್ಟಣದ ನ್ಯಾಯಾಲಯ ಆವರಣ
ಹೊಳೆನರಸೀಪುರ: ವಿಶ್ವದಲ್ಲೇ ಬೆಂಗಳೂರು ಪರಿಚಿತ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕೆಂಪೇಗೌಡರು ಕಾರಣ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೀಂದ್ರಶೆಟ್ಟಿ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಬುಧವಾರ ವಕೀಲರ ಸಂಘದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ದೂರದೃಷ್ಟಿ ಮತ್ತು ಜನಪರ ಕಾಳಜಿ ಇದ್ದ ಕೆಂಪೇಗೌಡರ ಶ್ರಮ ಎಂದೆಂದಿಗೂ ಸಾರ್ಥಕವಾದದ್ದು. ಅವರ ಸದ್ಭಾವನೆ ಸಂಪನ್ನವಾಗಲು ನಾವುಗಳು ಅವರ ಹಾದಿಯಲ್ಲಿ ನಡೆಯಬೇಕಿದೆ. ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಲಯಗಳಲ್ಲಿ ಅವರು ನಡೆಸಿದ ಚಿಂತನೆಗಳು ಅಜರಾಮರ ಎಂದರು.
ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ.ಉಡವಾರೆ ಮಾತನಾಡಿ, ನಾಡನ್ನು ಕಟ್ಟಿದ ಕೆಂಪೇಗೌಡರ ಸಾರ್ಥಕ ಬದುಕು ಮತ್ತು ಜನಪರ ಸೇವ ಸ್ಮರಣೀಯ ಎಂದು ಸ್ಮರಿಸಿದರು.
ಇದೇ ವೇಳೆ ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಲಾಯಿತು.ಅಧಿಕ ಸಿವಿಲ್ ನ್ಯಾಯಾಧೀಶೆ ಐಶ್ವರ್ಯಾ ಗುಡದಿನ್ನಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಕುಮಾರ್, ಹಿರಿಯ ವಕೀಲ ಶಿವಣ್ಣ, ಸರ್ಕಾರಿ ಅಭಿಯೋಜಿತ ವಕೀಲರಾದ ಸುನೀಲ್, ಶಿವಮ್ಮ, ಶಿರಿನ್ ಹಾಗೂ ವಕೀಲೆ ಶ್ವೇತಾ ಉಪಸ್ಥಿತರಿದ್ದರು.