ಬೆಳಗಾವಿಯ ಅಂಗಡಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದರು. 
ರಾಜ್ಯ

ಬದ್ಧತೆಯಲ್ಲೂ ವಿಜಯವಾಣಿ ನಂ.1

ಎಂ.ಎಸ್​.ಹಿರೇಮಠ ಬೆಳಗಾವಿ
ಬೆಳಗಾವಿ: ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಅಂಗಡಿ ವಿಜ್ಞಾನ ಮತ್ತು ವಾಣಿಜ್ಯ ಪಿಯು ಮಹಾವಿದ್ಯಾಲಯದ ಪ್ರಥಮ ವರ್ಷದ 58 ವಿದ್ಯಾರ್ಥಿಗಳು, ಪ್ರಾಚಾರ್ಯರು ಮತ್ತು ಉಪನ್ಯಾಸಕರು ಶುಕ್ರವಾರ ಹೊನಗಾದಲ್ಲಿನ ವಿಜಯವಾಣಿ ಪತ್ರಿಕೆ ಮುದ್ರಣಾಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಒಂದು ಪತ್ರಿಕೆ ಹಿಂದೆ ಎಷ್ಟೆಲ್ಲ ವಿಭಾಗಗಳಿರುತ್ತವೆ. ಎಷ್ಟು ಕೆಲಸ ಇರುತ್ತದೆ ಎಂಬುದನ್ನು ಅರಿತುಕೊಂಡರು. ಹಲವು ಪ್ರಶ್ನೆಗಳ ಮೂಲಕ ತಮ್ಮ ಗೊಂದಲಗಳನ್ನು ನಿವಾರಿಸಿಕೊಂಡರು. ಪತ್ರಿಕೆ ಮುದ್ರಣಗೊಂಡು ಹೊರಬರುವ ಪ್ರಕ್ರಿಯೆಯನ್ನು ಬೆರಗುಗಣ್ಣುಗಳಿಂದ ವೀಸಿದರು.