ಶಿಂದಿಕುರಬೇಟ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕರನ್ನು ಸನ್ಮಾನಿಸಲಾಯಿತು. ಮಹಾಂತೇಶ ಬೆಳಗಲಿ, ಪಿ.ಎಚ್.ಗೋಸಬಾಳ, ಮಹಾಂತೇಶ್ವರಿ ಹಿರೇಮಠ ಇತರರಿದ್ದರು.
ಗೋಕಾಕ: ಪಾಲಕರು ಮಕ್ಕಳಲ್ಲಿ ಶಿಣದ ಜತೆಗೆ ಸಂಸ್ಕಾರವನ್ನೂ ಬೆಳೆಸಬೇಕು ಎಂದು ಶಿಕ ಮಹಾಂತೇಶ ಬೆಳಗಲಿ ಹೇಳಿದರು.
ತಾಲೂಕಿನ ಶಿಂದಿಕುರಬೇಟ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮತಾ ಶಿಣ ಸಮಿತಿ ಮಾಧ್ಯಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಎಂದೂ ಮರೆಯಲಾಗದು. ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಣ ಅಗತ್ಯ ಎಂದರು. ಮುಖ್ಯಶಿಕ್ಷಕ ಪಿ.ಎಚ್.ಗೋಸಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೆ.ವಿ.ಕಡ್ಡಿ, ಎಸ್.ಎನ್.ವಡರಟ್ಟಿ, ಆರ್.ಬಿ.ಕರೆಪ್ಪಗೋಳ, ಕೃಷ್ಣ ತಡವಳೆ ಇತರರಿದ್ದರು. ಮಹಾಂತೇಶ್ವರಿ ಹಿರೇಮಠ ಪ್ರಾರ್ಥಿಸಿದರು. ಜ್ಯೋತಿ ನೀಲಗಾರ ಸ್ವಾಗತಿಸಿದರು. ಪ್ರಿಯಾ ಕಬಾಡಗಿ ಮತ್ತು ಶೋಭಾ ಕೊತ್ತಲ ನಿರೂಪಿಸಿದರು. ಆರತಿ ಹೊಸಪೇಟೆ ವಂದಿಸಿದರು.