ಯಾದಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಶ್ರೇಣಿಕಮಾರ ದೋಖಾ, ಉಪಾಧ್ಯಕ್ಷ ರಮೇಶ ದೊರೆ, ಶ್ಯಾಮಸನ್ ಮಾಳಿಕೇರಿ, ಹಣಮಂತ ಕನ್ನಳ್ಳಿ ಇತರರಿದ್ದರು.
- ಸತತ ಎರಡನೇ ಬಾರಿಯೂ ಸಭೆ ರದ್ದುಗೊಳಿಸಿದ ಅಧ್ಯಕ್ಷ ದೋಖಾ
- ಉನ್ನತ ಅಧಿಕಾರಿಗಳಿಂದ ಸಮಿತಿಗೆ ಅವಮಾನ
ಜಿಲ್ಲಾ ಪಂಚಾಯಿತಿ ಪ್ರಭಾರಿ ಸಿಇಒ ಆಗಿರುವ ಜಿಲ್ಲಾಧಿಕಾರಿ ಸಭೆಗೆ ಬರಲಿಲ್ಲ ಅಲ್ಲದೆ ಎಡಿಸಿ, ಇಲ್ಲವೇ ಡಿಎಸ್-೧ಅಧಿಕಾರಿಗಳಿಗೂ ಕಳಿಸಿದೆ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕಕ್ಕೆ ಅವಮಾನ ಮಾಡಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ದೋಖಾ ಅವರು ಹಠಾತ್ ಸಭೆ ರದ್ದುಗೊಳಿಸಿದ ಪ್ರಸಂಗ ಸೋಮವಾರ ನಡೆಯಿತು.
ಐದು ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ಪ್ರಗತಿ ಕೆಲಸ ಹೇಗೆ ನಡೆದಿದೆ, ಇನ್ನೂ ಏನೇನು ಆಗಬೇಕಿದೆ ಹೀಗೆ ವಿವಿಧ ವಿಷಯ ಚರ್ಚೆಗಾಗಿ ಇಲ್ಲಿನ ಜಿಪಂ ಕಚೇರಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಭೆ ಕರೆಯಲಾಗಿತ್ತು.
ಬೆಳಗ್ಗೆ ೧೧ಕ್ಕೆ ಅಧ್ಯಕ್ಷ ದೋಖಾ ನೇತೃತ್ವದಲ್ಲಿ ಉಪಾಧ್ಯಕ್ಷರು, ಸದಸ್ಯರು ಮತ್ತು ಆರು ತಾಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು. ಈ ಐದು ಯೋಜನೆಗಳಿಗೆ ಸಂಬAಧಪಡುವ ಅಽಕಾರಿಗಳು ಸಹ ಆಗಮಿಸಿದ್ದರು. ಮುಖ್ಯವಾಗಿ ಜಿಪಂ ಸಿಇಒ ಅವರು ಭಾಗವಹಿಸಬೇಕಿತ್ತು. ಆದರೆ ಹೊಸ ಸಿಇಒ ಅವರು ಇನ್ನು ಅಧಿಕಾರ ಸ್ವೀಕಾರ ಮಾಡದ ಕಾರಣ, ಡಿಸಿ ರಾಹುಲ್ ಪಾಂಡ್ವೆ ಅವರೇ ಪ್ರಭಾರಿ ಸಿಇಒ ಆಗಿದ್ದರಿಂದ ಅವರು ಬರಲೇಬೇಕೆಂದು ಉಪಾಧ್ಯಕ್ಷ ರಮೇಶ ದೊರೆ ಹಟಹಿಡಿದು ಕುಳಿತರು. ಇವರ ಧ್ವನಿಗೆ ಎಲ್ಲರೂ ಧ್ವನಿಗೂಡಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ದೋಖಾ ಅವರು, ಇದು ಎರಡನೇ ಸಲ ಸಭೆ ರದ್ದು ಮಾಡಲಾಗುತ್ತಿದೆ. ಕಳೆದ ಆ.೧೩ರಂದು ಸಹ ಜಿಪಂ ಸಿಇಒ ಅವರು ಬರಲಿಲ್ಲ. ಕೇಳಿದರೆ ಸಿಎಂ ಅವರು ಕರೆದ ಸಭೆಗೆ ಹೋಗಿದ್ದರಾಗಿ ಹೇಳಿದರು. ಆಗಲೂ ಸಭೆ ನಡೆಸಲಿಲ್ಲ. ನಂತರ ಅಧಿಕಾರಿಗಳೆ ಆ.೩೧ರಂದು ಸಭೆ ನಿಗದಿ ಮಾಡಿದ್ದಾರೆಂದು. ಆದರೂ ಸಭೆಗೆ ಬರುವ ಸೌಜನ್ಯ ತೊರದೆ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಜಿಪಂ ಪ್ರಭಾರಿ ಸಿಇಒ ಆಗಿರುವ ಡಿಸಿ ಅವರು ಭಾರಿ ಅವಮಾನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ಮತ್ತು ಸಮಿತಿಯನ್ನು ಉನ್ನತ ಅಽಕಾರಿಗಳು ಕೆಳಮಟ್ಟದಲ್ಲಿ ನೋಡುತ್ತಿದ್ದರೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಯ ಜಿಲ್ಲಾ ಮಟ್ಟದ ಸಭೆ ಬರುವುದಿಲ್ಲ ಎಂದರೆ ಏನು ಅರ್ಥ ಎಂದು ಕಿಡಿಕಾರಿದರು. ಉಪಾಧ್ಯಕ್ಷ ರಮೇಶ ದೊರೆ ಮಾತನಾಡಿ, ಡಿಸಿ ಅವರು ಬರುವವರೆಗೂ ಸಭೆ ನಡೆಸುವುದೇ ಬೇಡ ಎಂದರು. ಸುಮಾರು ಎರಡು ತಾಸಿಗೂ ಹೆಚ್ಚಿನ ಸಮಯ ಅವರಿಗಾಗಿ ಸಮಿತಿ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಕಾದು ಕೊನೆಗೆ ಸಭೆ ಮತ್ತೋಮ್ಮೆ ಮುಂದೂಡಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ಯಾಮಸನ್ ಮಾಳಿಕೇರಿ, ಹಣಮಂತ ಕಾನಳ್ಳಿ, ಹಳ್ಳಪ್ಪ ಹವಾಲ್ದಾರ, ತಾಲೂಕು ಅಧ್ಯಕ್ಷರಾದ ಬಸವರಾಜಪ್ಪ ಬಾಗಲಿ, ಕೃಷ್ಟಪ್ಪಗೌಡ ಆಲ್ದಾಳ, ಬೀರಲಿಂಗಪ್ಪ ಬ್ಯಾದಾಪುರ, ಕೃಷ್ಣಾ ಜÁಧವ್, ಖಾಜಾ ಮೈನೋದ್ಧೀನ್ ಮಿರ್ಚಿ, ಲಕ್ಷ್ಮೀಕಾಂತ ರೆಡ್ಡಿ ಸೇರಿ ಜಿಲ್ಲಾ ಘಟಕದ ಸದಸ್ಯರು ಭಾಗವಹಿಸಿದ್ದರು.