Improving the level of education through bicycle distribution
ಗುಬ್ಬಿ: ದೂರದ ಊರುಗಳಿಂದ ಶಾಲೆಗಳಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಸೈಕಲ್ ವಿತರಣೆ ಮಾಡಲಾಗುತ್ತಿದೆ ಎಂದು ಎನ್ಟಿಟಿ ಡೆಟಾ ಕಂಪನಿಯ ಉಪ ವ್ಯವಸ್ಥಾಪಕ ಕೋಟೇಶ್ವರ್ ತಿಳಿಸಿದರು.
ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎನ್ಟಿಟಿ ಡೆಟಾ ಕಂಪನಿ ಹಾಗೂ ಡೊನೆಟ್ ಕಾರ್ಟ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳ ಮನೆ ಹಾಗೂ ಶಾಲೆಯ ಅಂತರ ಹೆಚ್ಚಿದ್ದಾಗ ವಿದ್ಯಾರ್ಥಿಗಳು ಶಾಲೆ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ಸೈಕಲ್ ನೀಡಿದಾಗ ಅವರ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುತ್ತದೆ. ಶಿಕ್ಷಣದ ಮಟ್ಟವು ಸುಧಾರಿಸುತ್ತದೆ. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಮುಖ್ಯಶಿಕ್ಷಕಿ ಇಂದಿರಾ ಮಾತನಾಡಿ, ಮಕ್ಕಳು ಶಾಲೆಗೆ ಬರಲು ಕೆಲವು ಊರುಗಳಿಂದ ಸಾರಿಗೆ ವ್ಯವಸ್ಥೆಯ ಸಮಸ್ಯೆ ಇರುವುದರಿಂದ ಎನ್ಟಿಟಿ ಡೇಟಾ ಕಂಪನಿಯವರು ಸೈಕಲ್ ಗಳನ್ನು ವಿತರಣೆ ಮಾಡಿರುವುದು ಅನುಕೂಲಕರವಾಗಿದೆ. ಇದರಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿಯೂ ಹೆಚ್ಚುತ್ತದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ ಎಂದರು.\ ಶಾಲೆಯ 25 ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು.
ಗುಬ್ಬಿ ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರರಿಸಲಾಯಿತು. ಎನ್ಟಿಟಿ ಡೆಟಾ ಕಂಪನಿಯ ಉಪ ವ್ಯವಸ್ಥಾಪಕ ಕೋಟೇಶ್ವರ್, ಮುಖ್ಯಶಿಕ್ಷಕಿ ಇಂದಿರಾ, ಕಂಪನಿಯ ವ್ಯವಸ್ಥಾಕಿ ಅಕ್ಷತಾ, ಡೊನೆಟ್ ಕಾರ್ಟ್ ಸಂಸ್ಥೆಯ ವ್ಯವಸ್ಥಾಪಕಿ ಅಮೃತಾ, ಸಿಆರ್ಪಿ ರಂಗಸ್ವಾಮಿ, ಶಿಕ್ಷಕಿ ಶಿಲ್ಪಾ ಇದ್ದರು.