Improving health through good food
ಚಿಕ್ಕನಾಯಕನಹಳ್ಳಿ: ಗರ್ಭಕೋಶದ ಕ್ಯಾನ್ಸರ್ನಂತಹ ಮಾರಕ ರೋಗಗಳು ಬಾರದಂತೆ ತಡೆಯಲು ಎಚ್ವಿಪಿ ಲಸಿಕೆಯನ್ನು ಯಾವುದೇ ಭಯಪಡದೇ ಹಾಕಿಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಎಚ್ವಿಪಿ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಇಂದಿನ ಆಹಾರ ಪದ್ಧತಿಯಲ್ಲಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಸಮಯದಲ್ಲಿ ಗರ್ಭಕಂಠಕ ಕ್ಯಾನ್ಸರ್ನಂತರ ರೋಗಗಳಿಗೆ ಹೆಚ್ಚು ಜನ ತುತ್ತಾಗುತ್ತಿದ್ದು, ಇದನ್ನು ಗಮನಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಎಚ್ವಿಪಿ ಲಸಿಕಾ ಅಭಿಯಾನವನ್ನು ರೂಪಿಸಿದ್ದು, ಇದನ್ನು ಸದ್ಬಳಸಿಕೊಳ್ಳುವಂತೆ ತಿಳಿಸಿದರು.
ವೈದ್ಯೆ ಡಾ.ಸ್ಮೀತಾ ಮಾತನಾಡಿ, ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ಗೆ ಇದೇ ಎಚ್ವಿಪಿ ವೈರಸ್ ಕಾರಣವಾಗಿದೆ ಎಂಬುದು ಅಧ್ಯಯನದ ಮೂಲಕ ಗುರುಸಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಇದು ಕಳೆದ 15 ವರ್ಷಗಳಿಂದಲೇ ನೀಡಲಾಗುತ್ತಿದ್ದು, ಈಗಾಗಲೇ 50 ಕೋಟಿ ಲಸಿಕೆಯನ್ನು ಜಗತ್ತಿನಲ್ಲಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.