ಶಿರಾ ತಾಲೂಕು ಹುಲಿಕುಂಟೆCleanliness programme ಹೋಬಳಿಯ ಬರಗೂರು ರಂಗಾಪುರದಲ್ಲಿ ಗ್ರಾಮ ಸ್ವಚ್ಛತೆ ಕಾರ್ಯಕ್ರಮದಲ್ಲಿ ಹೃದಯರೋಗ ತಜ್ಞ ವೈದ್ಯಾಧಿಕಾರಿ ಡಾ.ಮುದ್ದರಂಗಪ್ಪ ರಂಗಾಪುರ, ಪೊರಕೆ ಮಂಜಣ್ಣ, ಬರಗೂರು ಗ್ರಾಪಂ ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮಂಜುನಾಥ್​, ಕಾರ್ಯದರ್ಶಿ ಲಕ್ಷ$್ಮಣ್​ ಇದ್ದರು.  
ರಾಜ್ಯ

ಸ್ವಚ್ಛತೆಯಿಂದ ಆರೋಗ್ಯ ವೃದ್ಧಿ Cleanliness programme

ತುಮಕೂರು ಡೆಸ್ಕ್
ಬರಗೂರು: ಗ್ರಾಮಗಳು ಸ್ವಚ್ಛವಾಗಿದ್ದರೆ ಮನುಷ್ಯರು ಆರೋಗ್ಯವಂತರಾಗಿರುತ್ತಾರೆ Cleanliness programme ಎಂದು ವೈದ್ಯಾಧಿಕಾರಿ ಡಾ.ಮುದ್ದರಂಗಪ್ಪ ರಂಗಾಪುರ ತಿಳಿಸಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ರಂಗಾಪುರದಲ್ಲಿ ಭಾನುವಾರ ಗ್ರಾಮಸ್ಥರು ಹಾಗೂ ಬಡಮಾರನಹಳ್ಳಿ ಪೊರಕೆ ಮಂಜುನಾಥ್​ ಆಯೋಜಿಸಿದ್ದ ಸ್ವಗ್ರಾಮ ರಂಗಾಪುರ ಗ್ರಾಮ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೊರಕೆ ಮಂಜಣ್ಣ ಎಂದೇ ಪ್ರಖ್ಯಾತಿ ಹೊಂದಿರುವ ಅವರ ಸ್ವಗ್ರಾಮದಿಂದ ಸ್ವಚ್ಛ ಕಾರ್ಯ ಆರಂಭಿಸಿ ಬಡಮಾರನಹಳ್ಳಿ, ಗೋಣಿಹಳ್ಳಿ, ಗೋಪಿಕುಂಟೆ, ಇದೀಗ ರಂಗಾಪುರದಲ್ಲಿ ಸ್ವಚ್ಛತೆ ಮಾಡಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ಬಡಮಾರನಹಳ್ಳಿ ಪೊರಕೆ ಮಂಜುನಾಥ್​ ಮಾತನಾಡಿ, 50 ವರ್ಷಗಳ ಹಿಂದೆ ಪ್ರಕೃತಿ ಸೌಂದರ್ಯವಾಗಿದ್ದು, ಹಳ್ಳ ಕೊಳ್ಳಗಳಲ್ಲಿ ನೀರು ಕುಡಿಯುವ ಸ್ಥಿತಿಯಿತ್ತು. ಈಗ ಹಳ್ಳ, ಕೊಳ್ಳಗಳಲ್ಲಿ ನೀರು ಕುಡಿದರೆ ರೋಗ ಬರುವುದು ಸಾಮಾನ್ಯವಾಗಿದೆ. ಸ್ವಚ್ಛವಾಗಿರುವ ಪರಿಸರಕ್ಕೆ ಹಾನಿಯಾಗದಂತೆ ಕಾಪಾಡುವ ಶಕ್ತಿ ನಾವಾಗಬೇಕಿದೆ, ಸೊಳ್ಳೆಗಳಿಂದ ರೋಗ ಹರಡುವುದನ್ನು ತಡೆದು ಉತ್ತಮ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದರು.
ಬಿಲ್​ ಕಲೆಕ್ಟರ್​ ಲಕ್ಷಿ$್ಮರಂಗನಾಥ್​, ಶಿಕ್ಷಕ ಸುಭಾಷ್​, ಚನ್ನಕೃಷ್ಣಪ್ಪ, ನಾರಾಯಣಪ್ಪ, ವಸಂತಪ್ಪ, ರಾಮಕೃಷ್ಣಪ್ಪ, ಬೊಮ್ಮೇಗೌಡ, ಭೂತರಾಜು, ರಾಜಣ್ಣ, ರಮೇಶ್​ ಇತರರು ಇದ್ದರು.