ತೊಗರಿ ವಿಮೆ ಪರಿಹಾರ, ಕೆಸರಟಗಿ ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂ, ಸಿಟಿಜನ್ ಫೋರಂ ಫಾರ ಪೀಸ್ ಆ್ಯಂಡ್ ಜಸ್ಟೀಸ್ ಸಂಟನೆ ಕಾರ್ಯಕರ್ತರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶರಣಬಸಪ್ಪ ಮಮಶೆಟ್ಟಿ, ಎಂ.ಬಿ.ಸಜ್ಜನ್, ಸಿದ್ದಪ್ಪ ಕಲಶೆಟ್ಟಿ, ದಿಲೀಪ ನಾಗೂರೆ ಇತರರಿದ್ದರು.
- ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ
- ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ
ಕಲಬುರಗಿ: ತಾಲೂಕಿನ ಕೆಸರಟಗಿ ಗ್ರಾಮದ ಬಳಿಯ ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ನಾಗರಿಕ ಸೌಲಭ್ಯ, ಸಂಪರ್ಕ ರಸ್ತೆ ಕಲ್ಪಿಸಬೇಕು, ರೈತರ ಬೆಳೆ ವಿಮೆ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಿಟಿಜನ್ ಫೋರಂ ಫಾರ ಪೀಸ್ ಆ್ಯಂಡ್ ಜಸ್ಟೀಸ್ ಸಂಟನೆ ಮತ್ತು ಕರ್ನಾಟಕ ಪ್ರಾಂತ ರೈತ ಸಂದ ಕಾರ್ಯಕರ್ತರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಶ್ರಯ ಕಾಲನಿಯಲ್ಲಿ ಸುಮಾರು 102 ಮನೆಗಳಲ್ಲಿ 492 ಜನ (ಮಕ್ಕಳು, ಮಹಿಳೆಯರು ಸೇರಿ) ವಾಸಿಸುತ್ತಿದ್ದಾರೆ. ಮನೆಗಳು ಸಂಪೂರ್ಣ ಹಾಳಾಗಿ ಹೋಗಿದ್ದವು. ವಾಸಕ್ಕೆ ಯೋಗ್ಯವಿರದ ಈ ಮನೆಗಳನ್ನು ದುರಸ್ತಿ ಮಾಡಿಸಿಕೊಂಡು 10 ವರ್ಷಗಳಿಂದ ವಾಸಿಸುತ್ತಿದ್ದಾರೆ. ಕಾಲನಿಗೆ ರಸ್ತೆ ಇಲ್ಲ, ನೀರು, ವಿದ್ಯುತ್ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ನಡುಗಡ್ಡೆಯಾಗುತ್ತಿದೆ. ಈ ಮನೆಗಳಿಗೆ ಯಾವುದೇ ಸಂಖ್ಯೆ ನೀಡಿಲ್ಲ. ಹೀಗಾಗಿ ಸತ್ತರೆ ಡೆತ್ ಸರ್ಟಿಫಿಕೇಟ್, ಹುಟ್ಟಿದರೆ ರ್ಬತ್ ಸರ್ಟಿಫಿಕೇಟ್ ಸಿಗುತ್ತಿಲ್ಲ ಎಂದು ದೂರಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈ ಜನರಿಗೆ ಸಕಲ ವ್ಯವಸ್ಥೆ ಕಲ್ಪಿಸಿಕೊಡಬೇಕು, ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರು ಭರಿಸಿದ ಬೆಳೆವಿಮೆ ಹಣ ಬಿಡುಗಡೆ ಮಾಢಬೇಕು, ಅತಿವೃಷ್ಟಿ ಬೆಳೆ ನಷ್ಟ ಪರಿಹಾರ ನೀಡಬೇಕು, ತೊಗರಿ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು, ಬೆಂಬಲ ಬೆಲೆ ನಿಗದಿ ಮಾಡಬೇಕು, ರೈತರ ಆತ್ಮಹತ್ಯೆ ತಡೆಗಟ್ಟಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಒಟ್ಟು 3.10 ಲಕ್ಷ ಜನ ರೈತರು 99 ಕೋಟಿ ರೂ. ವಿಮೆ ಪ್ರೀಮಿಯಂ ಭರಿಸಿದ್ದು, 3.78 ಹೆಕ್ಟೇರ್ ಬೆಳೆ ವಿಮೆ ಮಾಡಿಇದ ರೈತರಿಗೆ 30 ದಿನದೊಳಗೆ ವಿಮೆ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈವರೆಗೂ ಆಗಿಲ್ಲ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಫೋರಂ ಸಂಚಾಲಕ ಎಂ.ಬಿ.ಸಜ್ಜನ್, ಜಾವೀದ್ ಹುಸೇನ್, ಪ್ರಾಂತ ರೈತ ಸಂದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸೈಯದ್ ಹುಸೇನ್ ನಿವಾ, ದೇವೀಂದ್ರಪ್ಪ ಪಾಟೀಲ್, ದಿಲೀಪ ನಾಗೂರೆ, ಸಿದ್ದಪ್ಪ ಕಲಶೆಟ್ಟಿ, ಶಿವಲೀಲಾ, ಜಾಫರ್ ದೇವು ಬಿರಾದಾರ್, ಅಶ್ವಿನಿ, ಕವಿತಾ ಇತರರಿದ್ದರು.
ಮ್ಯಾನ್ಮಾರ್, ಮೊಜಾಂಬಿಕ, ತಾಂಜನಿಯಾ, ಸುಡಾನ್, ಮಾಲವಾ, ಬ್ರೆಜಿಲ್ ಸೇರಿ ವಿದೇಶಗಳಿಂದ 8.14 ಲಕ್ಷ ಮೆಟ್ರಿಕ್ ಟನ್ ತೊಗರಿ ಆಮದು ಮಾಡಿಕೊಂಡು ಮಾರುಕಟ್ಟೆಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಹೊರದೇಶದ ತೊಗರಿ ಮೇಲೆ ಶೇ.50ರಷ್ಟು ಆಮದು ಸುಂಕ ವಿಧಿಸಬೇಕು.
ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂ.