ಸೇಡಂ ತಾಲೂಕಿನ ಊಡಗಿಯಲ್ಲಿ ಯುವಕ ಭಗವಂತ ನಡಗೇರಿಯನ್ನು ಕೊಲೆಗೈದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಚಿಂಚೋಳಿಯಲ್ಲಿ ಮಾದರ ಮಹಾಸಭಾದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶಾಮರಾವ ಓಂಕಾರ, ಮಲ್ಲು ಕೊಡಂಬುಲ್​, ವಿಜಯಕುಮಾರ ಶಾಬಾದಿ, ನರಸಪ್ಪ ಕಿವಡನೂರ ಇತರರಿದ್ದರು. 
ರಾಜ್ಯ

ಕೊಲೆಗೈದವರಿಗೆ ಕಠಿಣ ಶಿಕ್ಷೆ ನೀಡಿ

ಬಾಬುರಾವ ಯಡ್ರಾಮಿ

ಚಿಂಚೋಳಿ: ರಾಜ್ಯದಲ್ಲಿ ಕಾನೂನು&ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ- ಸುಲಿಗೆ, ಜಾತಿನಿಂದನೆ ಪ್ರಕರಣ ದಿನಕಳೆದಂತೆ ಹೆಚ್ಚಾಗುತ್ತಿವೆ ಎಂದು ಕರ್ನಾಟಕ ಮಾದರ ಮಹಸಭಾ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ದೂರಿದರು. ಸೇಡಂ ತಾಲೂಕಿನ ಊಡಗಿಯಲ್ಲಿ ಯುವಕ ಭಗವಂತ ನಡಗೇರಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಪ್ರಜಾಸೌಧ ಮುಂದೆ ಕರ್ನಾಟಕ ಮಾದರ ಮಹಾಸಭಾ ಸಂಘಟನೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹತ್ಯೆಯಾದ ಯುವಕನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕಲ್ಪಿಸಬೇಕು. ಕುಟುಂಬ ಸದಸ್ಯರಿಗೆ ಕಾಯಂ ಸರ್ಕಾರಿ ನೌಕರಿ ಕಲ್ಪಿಸಬೇಕು. ಸರ್ಕಾರದ ಭೂ ಒಡೆತನ ಯೋಜನೆಯಡಿ 5 ಎಕರೆ ಜಮೀನು ಕಲ್ಪಿಸಬೇಕು. ಕೊಲೆ ಮಾಡಿದವ ಹಾಗೂ ಕುಟುಂಬವನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಶಾಮರಾವ ಓಂಕಾರ, ಮಲ್ಲು ಕೊಡಂಬುಲ್​, ವಿಜಯಕುಮಾರ ಶಾಬಾದಿ, ನರಸಪ್ಪ ಕಿವಡನೂರ, ಪ್ರೇಮ ಕಟ್ಟಿ, ಕಾಶಿನಾಥ ಮಾಸ್ಟರ್​, ಶರಣಪ್ಪ, ಮೋಹನ ಐನಾಪುರ ಇತರರಿದ್ದರು.